ಯೆನೆಪೊಯ ಸಂಶೋಧನಾ ಕೇಂದ್ರದ ಡಾ. ರಾಜೇಶ್ ಪಿ. ಶಾಸ್ತ್ರಿಗೆ 'ಕೇಂಬ್ರಿಡ್ಜ್ - ಹ್ಯಾಮಿಡ್ ಉಪನ್ಯಾಸ ಪ್ರಶಸ್ತಿ'

Update: 2018-09-08 11:47 GMT

ಮಂಗಳೂರು, ಸೆ. 8: ಯೆನೆಪೊಯ ಸಂಶೋಧನಾ ಕೇಂದ್ರದ ಡಾ. ರಾಜೇಶ್ ಪಿ. ಶಾಸ್ತ್ರಿ ಅವರಿಗೆ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ ಪುರಸ್ಕರಿಸಲ್ಪಡುವ ಯುನೈಟೆಡ್ ಕಿಂಗ್ಡಮ್ ಕೇಂಬ್ರಿಡ್ಜ್ ಹ್ಯಾಮಿಡ್ ಉಪನ್ಯಾಸ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.

ಮಾನವ ರೋಗಕಾರಕಗಳು ಮತ್ತು ಕ್ವೊರಮ್ ಸಂವೇದನೆ (quorum sensing in human pathogens) ಎಂಬ ಸಂಶೋಧನೆ ಯೋಜನೆಯಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಡಾ. ಮಾರ್ಟಿನ್ ವೆಲ್ಸ್ ರೊಂದಿಗೆ ಜೀವಶಾಸ್ತ್ರ ವಿಭಾಗದಲ್ಲಿ ಸಂಶೋಧನೆಗೆ ಅವರು ಆಯ್ಕೆಯಾಗಿದ್ದಾರೆ.

ಪ್ರಸ್ತುತ ಯೆನೆಪೊಯ ಸಂಶೋಧನ ಕೇಂದ್ರದಲ್ಲಿ ಸೂಕ್ಷ್ಮಾಣು ಜೀವ ವಿಜ್ಞಾನದ ಸಹ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸುವುದರೊಂದಿಗೆ ಬ್ಯಾಕ್ಟೀರಿಯಾದ ಕೋಶದ ಕೋಶ ಸಂವೇದನೆ ಸಂಬಂಧಿಸಿದ ಕ್ವೊರಮ್ ಸಂವೇದನೆಯನ್ನು ಸಂಧಿಸುವ ಅನೇಕ ರೋಗಕಾರಕಗಳಿಂದ ಬಳಸಲ್ಪಡುವ ವಿದ್ಯಮಾನದ ಸಂಶೋಧನಾ ತಂಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ರಾಜೇಶ್ ಪ್. ಶಾಸ್ತ್ರಿಯವರು ಸೆಪ್ಟೆಂಬರ್‌ನಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ನಡೆಯುವ ಉಪನ್ಯಾಸ ಮತ್ತು ಸಂವಹನಾ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಭಾಗವಹಿಸಲಿರುವರು.

ಅವರು ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯ ಶಿವಪ್ರಸಾದ್ ಶಾಸ್ತ್ರಿ ಚಾರ್ಮಾಡಿ ಮತ್ತು ವಿಮಲಾ ಶಾಸ್ತ್ರಿ ಇವರ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News