ನಾರಾವಿ ಸಂತ ಅಂತೋನಿ ಕಾಲೇಜಿನಲ್ಲಿ ‘ಕಲಾ ಸೊಬಗು – 2018’ ಕಾರ್ಯಕ್ರಮ

Update: 2018-09-08 12:21 GMT

ಬೆಳ್ತಂಗಡಿ, ಸೆ. 8: ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಿಗುವ ಅವಕಾಶಗಳನ್ನು ಬಳಸಿಕೊಂಡು ವಿದ್ಯಾರ್ಜನೆಯ ಸಂದರ್ಭದಲ್ಲಿ ಬದುಕನ್ನು ಕಟ್ಟುವ ಕಡೆಗೆ ಸಾಗಬೇಕು ಎಂದು ನ್ಯಾಷನಲ್ ಕ್ಯಾಥೋಲಿಕ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯ ಸುಶೀಲ್ ನೊರೊನಾó ಹೇಳಿದರು.

ಅವರು ನಾರಾವಿ ಸಂತ ಅಂತೋನಿ ಕಾಲೇಜಿನಲ್ಲಿ  ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ‘ಕಲಾ ಸೊಬಗು – 2018’ ಪ್ರತಿಭಾ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವಕಾಶಗಳನ್ನು ಸದ್ಬಳಕೆ ಮಾಡುವ ಗುಣವುಳ್ಳ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಗಳಿಸುತ್ತಾನೆ. ಸ್ಪರ್ಧಾತ್ಮಕವಾದ ಈ ಯುಗ ದಲ್ಲಿ ಸವಾಲುಗಳನ್ನು ಮೆಟ್ಟಿ ಪರಿಪೂರ್ಣ ಬದುಕನ್ನು ಹೊಂದುವ ಕಡೆಗೆ ಸದಾ ಚಿಂತನಾಶೀಲರಾಗಿರಬೇಕು ಎಂದರು.

ಸಮಾರಂಭದ  ಅಧ್ಯಕ್ಷತೆಯನ್ನು ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ. ಸೈಮನ್ ಡಿ’ಸೋಜರವರು ವಹಿಸಿದ್ದರು.

ತುಳು ಚಲನಚಿತ್ರ ನಟ ಸತೀಶ್ ಬಂದಾಲೆ ಪಚಿನಡ್ಕ ಹಾಗೂ  ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಕಲಾ ವಿಭಾಗದಲ್ಲಿ  ತೃತೀಯ ರ್ಯಾಂಕ್ ಪಡೆದ ಕಾಲೇಜಿನ ಹಳೆ ವಿದ್ಯಾರ್ಥಿನಿ ಅಭಿನಂದನ್ ರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ಪಂಚಾಯತ್ ಸದಸ್ಯ ಜೋಯಲ್ ಡಿ ಮೆಂಡೋನ್ಸಾ, ಪ್ಯಾರೀಸ್ ಪ್ಯಾಸ್ಟೊರಲ್ ಪರಿಷತ್ತಿನ ಕಾರ್ಯದರ್ಶಿ ರೀಟಾ ಪಿಂಟೊ, ಕಾಲೇಜು ಆಡಳಿತ ಮಂಡಳಿ ಸದಸ್ಯ ಸಂಜಯ್ ಮಿರಾಂದ, ತುಳು ರಂಗಭೂಮಿ ಕಲಾವಿದ ರಿಚರ್ಡ್ ಪಿಂಟೋ ಹಾಗೂ ಕಾಲೇಜಿನ ಉಪಪ್ರಾಂಶುಪಾಲ ಸಂತೋಷ್ ಸಲ್ದಾನ್ಹ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲ ವಂ. ಅರುಣ್ ವಿಲ್ಸನ್ ಲೋಬೊ ಪ್ರಸ್ತಾವಿಕವಾಗಿ ಮಾತನಾಡಿದರು. ಜೀವಶಾಸ್ತ್ರ ಉಪನ್ಯಾಸಕಿ  ದೀಕ್ಷಾ ಗಣೇಶ್ ಸ್ವಾಗತಿಸಿ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರದೀಪ್ ವಂದಿಸಿದರು.  ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.

ಸಮಗ್ರ ಪ್ರಶಸ್ತಿ

ಸ್ಪರ್ಧೆಯಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಸೇಕ್ರೆಡ್ ಹಾರ್ಟ್ ಹೈಸ್ಕೂಲ್ ಬಜಗೋಳಿ, ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ಪಡೆದುಕೊಂಡರೆ, ಕಾಲೇಜು ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ವಾಣಿ ಪಿ.ಯು. ಕಾಲೇಜ್ ಹಾಗೂ ದ್ವಿತೀಯ ಸ್ಥಾನವನ್ನು ಮೂಡುಬಿದಿರೆ ಜೈನ್ ಪಿ.ಯು. ಕಾಲೇಜ್ ಪಡೆದುಕೊಂಡವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News