ತಪ್ಪು ಸಂಭವಿಸುತ್ತದೆ ಎಂದ ಕೇರಳ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ !

Update: 2018-09-08 14:25 GMT

ತಿರುವನಂತಪುರ, ಸೆ. 8: ಕೇರಳ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಎಂ.ಸಿ. ಜೋಸೆಫೈನ್ ನೀಡಿದ ಹೇಳಿಕೆ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಸಿಪಿಎಂ ಶಾಸಕನನ್ನು ರಕ್ಷಿಸುವಂತೆ ಕಾಣುತ್ತಿದೆ. ಶೊರ್ನೂರು ಕ್ಷೇತ್ರದ ಶಾಸಕ ಹಾಗೂ ಕೇರಳದ ಆಡಳಿತಾರೂಢ ಪಕ್ಷದ ನಾಯಕ ಪಿ.ಕೆ. ಶಶಿ ಡಿವೈಎಫ್‌ಐ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಒಳಗಾಗಿದ್ದಾರೆ.

‘‘ನಾವು ಮಾನವರು. ತಪ್ಪು ಸಂಭವಿಸುತ್ತದೆ. ಪಕ್ಷದ ಒಳಗಿನ ಕೆಲವು ಜನರು ಕೂಡ ತಪ್ಪು ಮಾಡುತ್ತಾರೆ.’’ ಎಂದು ಜೋಸೆಫೈನ್ ಹೇಳಿದ್ದಾರೆ. ನಾವು ಯಾವುದೇ ದೂರು ಸ್ವೀಕರಿಸಿಲ್ಲ. ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲು ಕನಿಷ್ಠ ಮಾಧ್ಯಮ ಅಥವಾ ಸಂತ್ರಸ್ತೆಯಿಂದ ಬಹಿರಂಗಗೊಂಡ ಮೂಲ ವಿವರಗಳು ಬೇಕು. ಈ ಪ್ರಕರಣದಲ್ಲಿ ವಿವರಗಳು ಬಹಿರಂಗಗೊಂಡಿಲ್ಲ. ನಾವು ದೂರು ದಾಖಲಿಸಿಕೊಳ್ಳುವುದು ಹೇಗೆ ? ಎಂದು ಜೋಸೆಫೈನ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News