ಟಾಟಾ ಸುಮೋ ಢಿಕ್ಕಿ: ಮಹಿಳೆ ಮೃತ್ಯು

Update: 2018-09-08 16:44 GMT

ಮಣಿಪಾಲ, ಸೆ.8: 80ಬಡಗಬೆಟ್ಟು ಗ್ರಾಮದ ದಶರಥನಗರ ನಡಿದಾರೆ ರಸ್ತೆಯಲ್ಲಿ ಸೆ.7ರಂದು ಸಂಜೆ ವೇಳೆ ಟಾಟಾ ಸುಮೋ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ದಶರಥನಗರದ ನಡಿದಾರೆಯ ಚಂದ್ರಶೇಖರ ಪ್ರಭು ಎಂಬವರ ಪತ್ನಿ ಚಂದ್ರಾವತಿ(60) ಎಂದು ಗುರುತಿಸಲಾಗಿದೆ. ಇವರು ತನ್ನ ಪತಿ ಜೊತೆ ಮೇಯಲು ಬಿಟ್ಟ ದನಕರುಗಳನ್ನು ಕರೆದುಕೊಂಡು ಬರಲು ಹೋಗಿದ್ದಾಗ ದಶರಥನಗರ ಕಡೆಯಿಂದ ಬಂದ ಟಾಟಾ ಸುಮೋ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಬಳಿಕ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಚಂದ್ರಾವತಿಗೆ ಢಿಕ್ಕಿ ಹೊಡೆಯಿತು. ಇದರಿಂದ ಗಂಭೀರವಾಗಿ ಗಾಯಗೊಂಡ ಚಂದ್ರಾವತಿ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಸಂಜೆ ವೇಳೆ ಮೃತಪಟ್ಟರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News