ಎಸ್.ಡಿ.ಪಿ.ಐ ಪುದು ಗ್ರಾಮ ಸಮಿತಿ ವತಿಯಿಂದ ಶ್ರಮದಾನ

Update: 2018-09-09 09:08 GMT

ಫರಂಗಿಪೇಟೆ, ಸೆ. 9: ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪುದು ಗ್ರಾಮ ಸಮಿತಿ ವತಿಯಿಂದ ರವಿವಾರ ಶ್ರಮದಾನ ನಡೆಯಿತು.

ಅಮೆಮಾರ್ ನಿಂದ ಹತ್ತನೇ ಮೈಲ್ ಕಲ್ಲು ಮತ್ತು ಫರಂಗಿಪೇಟೆ ಹೋಗುವ ರಸ್ತೆಯ ಇಕ್ಕೆಲಗಲಲ್ಲಿರುವ ಗಿಡಗಂಟಿಗಳನ್ನು ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ ಪುದು ಗ್ರಾಪಂ ಸದಸ್ಯ ನಝೀರ್ ಹತ್ತನೇ ಮೈಲ್ ಕಲ್ಲು, ಕ್ಷೇತ್ರ ಸಮಿತಿ ಉಪಾಧ್ಯಕ್ಷ ಸುಲೈಮಾನ್ ಉಸ್ತಾದ್, ಪುದು ಗ್ರಾಮ ಸಮಿತಿ ಅಧ್ಯಕ್ಷ ಇಕ್ಬಾಲ್ ಅಮೆಮಾರ್, ಪುದು ಪಂಚಾಯತ್ ಸಿಬ್ಬಂದಿ ಕೈಸ್, ಅಮೆಮಾರ್ ಘಟಕ ಅಧ್ಯಕ್ಷ ಕಾದರ್, ಕಾರ್ಯದರ್ಶಿ ಹಮೀದ್ ಅಮೆಮಾರ್ ಹಾಗೂ ಕಾರ್ಯಕರ್ತರಾದ ಅಶ್ರಫ್, ಲತೀಫ್, ಶಬೀರ್, ಹಬೀಬ್, ನೌಫಲ್ ಕರ್ಮಾರ್, ಜಾಫರ್, ನೌಫಲ್, ಮುಕ್ತಾರ್, ನಾಸಿರ್ ಮುಝಮ್ಮಿಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News