ಭಟ್ಕಳದಲ್ಲಿ ಇಲಿ ಜ್ವರದ ಶಂಕೆ: ಮಹಿಳೆ ಮೃತ್ಯು

Update: 2018-09-09 12:12 GMT

ಭಟ್ಕಳ, ಸೆ. 9: ಮುಟ್ಟಳ್ಳಿಯನ ಹೂವಿನ ಹಿತ್ಲುವಿನ ಮಹಿಳೆಯೋರ್ವರು ಜ್ವರಿಂದ ಮೃತಪಟ್ಟಿದ್ದು ಇಲಿ ಜ್ವರದ ಶಂಕೆ ವ್ಯಕ್ತವಾಗಿದೆ.

ಮೃತರನ್ನು ಮೂಕಾಂಬು ಸುರೇಶ ನಾಯ್ಕ (35) ಎಂದು ಗುರುತಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ಈಕೆಗೆ ಸ್ಥಳೀಯ ವೈದ್ಯರಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಕಾಯಿಲೆ ಉಲ್ಬಣಗೊಂಡ ಕಾರಣದಿಂದ ಸೆ.6ರಂದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯಲ್ಲಿರುವಾಗಲೇ ಸೆ.8ರಂದು ಮೃತ ಪಟ್ಟಿದ್ದು ಇಲಿ ಜ್ವರದ ಶಂಕೆ ವ್ಯಕ್ತವಾಗಿದೆ. ಮಹಿಳೆಯ ಎರಡೂ ಕಿಡ್ನಿಯು ಡ್ಯಾಮೇಜ್ ಆಗಿದ್ದು ಇದು ಇಲಿ ಜ್ವರದಿಂದಲೇ ಆಗಿದೆಯೇ ಇಲ್ಲ ಬೇರೆ ಕಾರಣ ಇದೆಯೇ ಎನ್ನುವ ಕುರಿತು ಇನ್ನೂ ವರದಿ ಬಂದಿಲ್ಲ ಎನ್ನಲಾಗಿದೆ.

ಇಲಿಜ್ವರದ ಶಂಕೆ

ಈ ಕುರಿತು ತಾಲೂಕಾ ಆರೋಗ್ಯಾಧಿಕಾರಿ ಡಾ. ಮೂರ್ತಿರಾಜ ಭಟ್ಟ ಅವರನ್ನು ಸಂಪರ್ಕಿಸಿದಾಗ, ಮಹಿಳೆಯ ಮರಣದ ವರದಿಯಲ್ಲಿ ಕಿಡ್ನಿಗಳಿಗೆ ಡ್ಯಾಮೇಜ್ ಆಗಿ ಮೃತ ಪಟ್ಟಿದ್ದು ಇಲಿ ಜ್ವರದಿಂದಲೇ ಆಗಿರುವ ಶಂಕೆಯನ್ನು ವ್ಯಕ್ತಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News