ಭಾರತ್ ಬಂದ್: ಅಟೋ ಯೂನಿಯನ್ ಬೆಂಬಲ

Update: 2018-09-09 13:02 GMT

ಉಡುಪಿ, ಸೆ.9: ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕರೆ ನೀಡಿ ರುವ ಭಾರತ್ ಬಂದ್‌ಗೆ ಉಡುಪಿ ಜಿಲ್ಲಾ ಆಶ್ರಯದಾತ ಅಟೋ ಯೂನಿ ಯನ್ ಬೆಂಬಲ ವ್ಯಕ್ತಪಡಿಸಿದೆ.

ಈ ಪ್ರಯುಕ್ತ ಸೆ.10ರಂದು ಬೆಳಗ್ಗೆ 10ಗಂಟೆಗೆ ನಗರದ ಬೋರ್ಡ್ ಹೈಸ್ಕೂಲ್‌ನಿಂದ ತ್ರಿವೇಣಿ ಸರ್ಕಲ್‌ವರೆಗೆ ರಿಕ್ಷಾವನ್ನು ತಳ್ಳಿಕೊಂಡು ಹೋಗುವ ಮೂಲಕ ಸಾಂಕೇತಿಕ ಪ್ರತಿಭಟನೆ ನಡೆಸಲಾಗುವುದು ಎಂದು ಯೂನಿಯನ್ ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡಬೆಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News