ಮಂಗಳೂರು: ಪೊಲೀಸ್ ಬಂದೋಬಸ್ತ್

Update: 2018-09-09 15:25 GMT

ಮಂಗಳೂರು, ಸೆ.9: ಇದೇ ಸೆ.10ರಂದು ನಡೆಸಲು ಉದ್ದೇಶಿಸಿರುವ ಬಂದ್ ಆಚರಣೆಯ ಸಂದರ್ಭ ಬಂದೋಬಸ್ತ್ ಕರ್ತವ್ಯಕ್ಕಾಗಿ ಮಂಗಳೂರು ನಗರ ಪೊಲೀಸ್ ವತಿಯಿಂದ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಈಗಾಗಲೇ 1 ಡಿಸಿಪಿ, 4 ಎಸಿಪಿ, 25 ಪೊಲೀಸ್ ಇನ್‌ಸ್ಪೆಕ್ಟರ್, 30 ಪಿಎಸ್ಸೈ ಮತ್ತು 1,000 ಸಿವಿಲ್ ಸಿಬ್ಬಂದಿ, 150 ಹೋಮ್ ಗಾರ್ಡ್ಸ್, 4 ಕೆಎಸ್‌ಆರ್‌ಪಿ ತುಕುಡಿ, 10 ಸಿಎಆರ್ ತುಕುಡಿಗಳನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಈ ಸಂದರ್ಭ ಯಾವುದೇ ಆಹಿತಕರ ಘಟನೆಗಳು ಜರುಗದಂತೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಮುನ್ನಚ್ಚರಿಕೆ ಕ್ರಮವಾಗಿ ಸಮಾಜ ಘಾತುಕ ವ್ಯಕ್ತಿಗಳ ಮೇಲೆ ಸೂಕ್ತ ನಿಗಾ ಇಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಇಲಾಖೆಯು ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News