ನಿಧನ: ವಿ.ಐ. ಮಾಥ್ಯೂಸ್ ಕೋರ್ ಎಪ್ಪಿಸ್ಕೋಪ್ಪಾ

Update: 2018-09-09 16:50 GMT

ಕಡಬ, ಸೆ. 9. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಲಂಕರ ಓರ್ಥೋಡೋಕ್ಸ್ ಸಿರಿಯನ್ ಚರ್ಚಿನ ವಿವಿಧ ದೇವಾಲಯಗಳಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದ ವಂ. ವಿ.ಐ. ಮಾಥ್ಯೂಸ್ ಕೋರ್ ಎಪ್ಪಿಸ್ಕೋಪ್ಪಾ (88) ಬೆಂಗಳೂರಿನ ತನ್ನ ಸ್ವಗೃಹದಲ್ಲಿ ರವಿವಾರದಂದು ನಿಧನ ಹೊಂದಿದರು.

ದಿ. ವಿ.ಐ. ಐಸ್ಸಾಕ್ ಹಾಗೂ ದಿ. ಬೀನಾಮ್ಮ ಐಸ್ಸಾಕ್ ಅವರ ಹಿರಿಯ ಪುತ್ರರಾದ ಅವರು ಇಚಿಲಂಪಾಡಿ ಜೋರ್ಜಿಯನ್ ತೀರ್ಥಾಟಕ ಕೇಂದ್ರದ ಅಭಿವೃದ್ದಿಯಲ್ಲಿ ಗಣನೀಯ ಪಾತ್ರ ವಹಿಸಿದ್ದರು.

18 ವರ್ಷಗಳ ಕಾಲ ಇಚಿಲಂಪಾಡಿ ಜೋರ್ಜಿಯನ್ ತೀರ್ಥಾಟಕ ಕೇಂದ್ರದ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದ ಅವರಿಗೆ ಕೋರ್ ಎಪ್ಪಿಸ್ಕೋಪಾ ಪದವಿಯನ್ನು ಮಲಂಕರ ಓರ್ಥೋಡೋಕ್ಸ್ ಸಿರಿಯನ್ ಚರ್ಚಿನ ಪರವಾಗಿ ನೀಡಲಾಗಿತ್ತು. ಸಂಪ್ಯಾಡಿ, ಪದವು, ನೆಲ್ಯಾಡಿ, ಮಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಮಲಬಾರ್ ಧರ್ಮಪ್ರಾಂತ್ಯದ ವಿವಿಧ ದೇವಾಲಯಗಳಲ್ಲಿ ಸೇವೆ ಸಲ್ಲಿಸಿದ್ದ ಅವರು ಬೆಂಗಳೂರಿನಲ್ಲಿ ಮಾಥ್ಯೂಸ್ ಕಾಲೇಜ್ ಆಫ್ ನರ್ಸಿಂಗ್ ವಿದ್ಯಾ ಸಂಸ್ಥೆಯನ್ನು ನಡೆಸುತ್ತಿದ್ದರು.

ವಿದ್ಯಾ ಕ್ಷೇತ್ರದಲ್ಲಿನ ಶ್ಲಾಘನೀಯ ಸೇವೆ ಹಾಗೂ ಅನೇಕರಿಗೆ ವಿದ್ಯೆಗಾಗಿ ಧನ ಸಹಾಯ ನೀಡುವುದು, ಅನೇಕ ಚಾರಿಟಿ ಕಾರ್ಯಕ್ರಮಗಳಿಂದ ಪ್ರಸಿದ್ಧರಾಗಿದ್ದರು.

ಮೃತರು ಓರ್ವ ಪುತ್ರನನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News