ಟಿಬೆಟ್ ಚೀನಾದ ಪ್ರಾಕೃತಿಕ ‘ರಕ್ಷಣಾ ತಡೆಗೋಡೆ’: ಚೀನಾ

Update: 2018-09-09 17:29 GMT

ಲಾಸಾ (ಟಿಬೆಟ್), ಸೆ. 9: ಟಿಬೆಟ್ ಪ್ರಾಕೃತಿಕ ‘ರಕ್ಷಣಾ ತಡೆಗೋಡೆ’ಯಾಗಿದೆ ಹಾಗೂ ಅದು ನೇಪಾಳದ ಮೂಲಕ ದಕ್ಷಿಣ ಏಶ್ಯಕ್ಕೆ ಹೆಬ್ಬಾಗಿಲಾಗಿದೆ ಎಂದು ಟಿಬೆಟ್ ಸ್ವಾಯತ್ತ ವಲಯದ ಅಧ್ಯಕ್ಷ ಕಿ ಝಾಲ ಹೇಳಿದ್ದಾರೆ.

ಅವರ ವಲಯಕ್ಕೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಆಯೋಜಿಸಲಾದ 4ನೇ ಟಿಬೆಟ್ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಪ್ರದರ್ಶನದಲ್ಲಿ ಶುಕ್ರವಾರ ಮಾತನಾಡುತ್ತಿದ್ದರು.

 ಪ್ರಸಕ್ತ ಈ ವಲಯ ವಿದೇಶಿ ಪ್ರವಾಸಿಗರಿಗೆ ನಿರ್ಬಂಧಿತ ಪ್ರದೇಶವಾಗಿದೆ ಹಾಗೂ ಸರಕಾರದ ಅನುಮೋದನೆ ಹೊಂದಿಲ್ಲದ ಪತ್ರಕರ್ತರಿಗಂತೂ ಇದು ಸಂಪೂರ್ಣ ನಿಷಿದ್ಧ ವಲಯವಾಗಿದೆ.

‘‘ಟಿಬೆಟ್ ನಮ್ಮ ಶ್ರೇಷ್ಠ ಮಾತೃಭೂಮಿಯ ಪವಿತ್ರ ಹಾಗೂ ಬೇರ್ಪಡಿಸಲಾಗದ ಭಾಗವಾಗಿದೆ. ಇದು ನಮ್ಮ ಮಹತ್ವದ ರಾಷ್ಟ್ರೀಯ ಭದ್ರತಾ ತಡೆಗೋಡೆಯಾಗಿದೆ ಹಾಗೂ ಪ್ರಾಕೃತಿಕ ಭದ್ರತಾ ತಡೆಯೂ ಆಗಿದೆ’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News