ಕಡಬದಲ್ಲಿ ಬಂದ್‌ಗೆ ಭಾರೀ ಬೆಂಬಲ

Update: 2018-09-10 07:47 GMT

ಕಡಬ, ಸೆ.10. ಪೆಟ್ರೋಲ್ ಬೆಲೆಯೇರಿಕೆ ಖಂಡಿಸಿ ಕಾಂಗ್ರೆಸ್ ಕರೆ ನೀಡಿದ್ದ ಭಾರತ ಬಂದ್‌ಗೆ ಕಡಬದಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.

ಅಂಗಡಿ ಮಾಲಕರು ಸ್ವಯಂಪ್ರೇರಿತವಾಗಿ ಅಂಗಡಿಮುಂಗಟ್ಟುಗಳನ್ನು ಮುಚ್ಚುವ ಮೂಲಕ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೆಲವು ರಿಕ್ಷಾ, ಜೀಪ್ ಸೇರಿದಂತೆ ಟೂರಿಸ್ಟ್ ವಾಹನಗಳು ರಸ್ತೆಗಿಳಿದರೂ ಪ್ರಯಾಣಿಕರಿಲ್ಲದೆ ಪರದಾಡಿದರು.

ಉಳಿದಂತೆ ಮೆಡಿಕಲ್‌ಗಳು, ಹಾಲು, ಪೇಪರ್ ಅಂಗಡಿಗಳು ತೆರೆದಿವೆ. ಕಡಬ, ಹೊಸ್ಮಠ, ಕುಂತೂರು, ಮರ್ಧಾಳ ಸಂಪೂರ್ಣ ಬಂದ್ ಆಗಿವೆ. ಆದರೆ ನೆಟ್ಟಣ, ಆಲಂಕಾರು ಪೇಟೆಯಲ್ಲಿ ಕೆಲವು ಅಂಗಡಿಗಳು ತೆರೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News