ಬಂಟ್ವಾಳ: ಬಂದ್ ಬೆಂಬಲಿಸಿ ದ್ವಿಚಕ್ರ ವಾಹನ ತಳ್ಳುವ ಮೂಲಕ ಎಸ್.ಡಿ.ಪಿ.ಐ ಯಿಂದ ಪ್ರತಿಭಟನೆ

Update: 2018-09-10 12:53 GMT

ಬಂಟ್ವಾಳ, ಸೆ. 10: ಪೆಟ್ರೋಲ್, ಡಿಸೆಲ್, ಗ್ಯಾಸ್ ಮತ್ತು ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ ಕೇಂದ್ರ ಸರಕಾರದ ವಿರುದ್ಧ ಸರ್ವ ಪಕ್ಷಗಳು ಕರೆ ನೀಡಿದ ಭಾರತ ಬಂದ್‍ಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವು ಬೆಂಬಲಿಸಿ ಕೈಕಂಬ ಜಂಕ್ಷನ್‍ನಲ್ಲಿ ದ್ವಿಚಕ್ರ ವಾಹನವನ್ನು ತಳ್ಳುವುದರ ಮೂಲಕ ಪ್ರತಿಭಟನೆ ನಡೆಸಿತು.

ಪ್ರತಿಭಟನಾಸಭೆಯಲ್ಲಿ ಭಾಗವಹಿಸಿದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮಾತನಾಡಿ, ಬಿಜೆಪಿ ಸರಕಾರ ಬಂದ 100 ದಿನಗಳಲ್ಲಿ ದುರಾಡಳಿದ ವಿರುದ್ಧ ಅಚ್ಚೇ ದಿನ್ ಕಿ ಸಚ್ಚಾಯಿ ಎಂಬ ಅಭಿಯಾನ ಮಾಡಿ ಜನರಿಗೆ ಮೋದಿ ಸರಕಾರದ  ವಾಸ್ತವವನ್ನು ಎಸ್‍ಡಿಪಿಐ ದೇಶಾದಾದ್ಯಂತ ತಿಳಿಸಿತ್ತು. ಇದೀಗ ಇತರ ಪಕ್ಷಗಳು ನಿದ್ರೆಯಿಂದ ಎಚ್ಚರವಾಗಿದೆ ಎಂದು ವ್ಯಂಗ್ಯ ನುಡಿದರು.

ಅದಲ್ಲದೇ ಈ ಬಂದ್ ಕೇವಲ ರಾಜಕೀಯ ಹಿತಾಸಕ್ತಿಗೋಸ್ಕರ ಮಾಡದೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ಕೆಟ್ಟ ಸರಕಾರವನ್ನು ಉರುಳಿಸಲು ಎಲ್ಲ ಮಿತ್ರ ಪಕ್ಷದೊಂದಿಗೆ ಒಂದಾಗಬೇಕೆಂದರು.

ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಎಸ್.ಎಚ್. ನಾಯಕರಾದ ಅಲ್ಫೋನ್ಸ್ ಫ್ರಾಂಕೋ, ಜಿಲ್ಲಾ ಉಪಾಧ್ಯಕ್ಷ ಅಂಟೋನಿ ಪಿಡಿ, ರಾಮಣ್ಣ ಶೆಟ್ಟಿ, ಯೂಸುಫ್ ಆಲಡ್ಕ, ಪುರಸಭಾ ಸದಸ್ಯರಾದ ಮುನಿಶ್ ಅಲಿ, ಇದ್ರೀಸ್ ಪಿ.ಜೆ. ಮುಂತಾದವರು ಉಪಸ್ಥಿತರಿದ್ದರು. ಮಾಲಿಕ್ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News