ಭಟ್ಕಳ: ಮಹಿಳೆಯರು ಸೇರಿದಂತೆ ನಾಲ್ವರಿಗೆ ಹುಚ್ಚು ನಾಯಿ ಕಡಿತ

Update: 2018-09-10 13:19 GMT

ಭಟ್ಕಳ, ಸೆ. 10: ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರಿಗೆ ಹುಚ್ಚು ನಾಯಿ ಕಡಿದು ಆಸ್ಪತ್ರೆ ದಾಖಲಾದ ಘಟನೆ ಸೋಮವಾರ ತಾಲೂಕಿನ ಮುಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಮೂಡಭಟ್ಕಳದಲ್ಲಿ ನಡೆದಿದೆ. 

ಹುಚ್ಚು ನಾಯಿ ಕಡಿತಕ್ಕೊಳಗಾದವರನ್ನು  ಮೂಡಭಟ್ಕಳದ ಸಾವಿತ್ರಿ ಕೃಷ್ಣ ನಾಯ್ಕ (40), ಲಕ್ಷ್ಮಣ ವೆಂಕಟಪ್ಪ ನಾಯ್ಕ (38), ಮುಟ್ಟಳ್ಳಿ ಗ್ರಾಮದ ಮೀನಾಕ್ಷಿ ನಾರಾಯಣ ನಾಯ್ಕ(28) ಹಾಗೂ ರಜನಿ ವೆಂಕಟರಮಣ ನಾಯ್ಕ(28) ಎಂದು ಗುರುತಿಸಲಾಗಿದೆ. 

ಹುಚ್ಚು ನಾಯಿಕಡಿತಕ್ಕೊಳಗಾದವರನ್ನು ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಹುಚ್ಚು ನಾಯಿ ಕಡಿತಕ್ಕೆ ಬೇಕಾದ ಚುಚ್ಚು ಮದ್ದು ಲಭ್ಯವಿಲ್ಲದ ಕಾರಣ ಹೊರಗಡೆಯಿಂದ ಚುಚ್ಚುಮದ್ದನ್ನು ತಂದು ಚಿಕಿತ್ಸೆ ಮಾಡಲಾಯಿತು ಎಂದು ತಿಳಿದುಬಂದಿದೆ.

ಭಟ್ಕಳದ ತಾಲೂಕು ಆಸ್ಪತ್ರೆಯಲ್ಲಿ ಹುಚ್ಚು ನಾಯಿ ಕಡಿತಕ್ಕೆ ಚುಚ್ಚುಮದ್ದು ಲಭ್ಯ ಇಲ್ಲದ್ದನ್ನು ಪ್ರಶ್ನಿಸಿ ಕಡಿತಕ್ಕೊಳಗಾದ ಕುಟುಂಬದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರದಿಂದ ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ಚುಚ್ಚು ಮದ್ದು ಪೂರೈಕೆಯಾಗಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಹೊರಗಡೆ ಖಾಸಗಿ ಮೆಡಿಕಲ್ ನಲ್ಲಿ ಚುಚ್ಚು ಮದ್ದು ಲಭ್ಯವಿದ್ದರೂ ಅದು ದುಬಾರಿಯಾಗಿದ್ದು ಬಡಜನರ ಕೈಗೆ ಎಟುಕದ್ದು ಸರ್ಕಾರ ಆಸ್ಪತ್ರೆಗೆ ಚುಚ್ಚು ಮದ್ದು ಪೂರೈಕೆ ಮಾಡಬೇಕು ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News