ಭಾರತ್ ಬಂದ್: ಉಡುಪಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ

Update: 2018-09-10 14:38 GMT

ಉಡುಪಿ, ಸೆ.10: ಇಂಧನಗಳ ಬೆಲೆ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವು ಜೆಡಿಎಸ್ ಹಾಗೂ ಇತರ ವಿಪಕ್ಷಗಳ ಬೆಂಬಲದೊಂದಿಗೆ ಇಂದು ನಡೆಸಿದ ಭಾರತ ಬಂದ್‌ಗೆ ಉಡುಪಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉಡುಪಿ ನಗರವನ್ನು ಹೊರತು ಪಡಿಸಿ ಜಿಲ್ಲೆಯ ಉಳಿದೆಡೆಗಳಲ್ಲಿ ಶಾಂತಿಯುತ ಬಂದ್ ನಡೆಯಿತು.

ಆದರೆ ಉಡುಪಿ ನಗರದೊಳಗೆ ಅಲ್ಲಲ್ಲಿ ಬಂದ್ ಪರ ಹಾಗೂ ವಿರೋಧದ ವಿಷಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಜಟಾಪಟಿ ಹಾಗೂ ಘರ್ಷಣೆಗಳು ನಡೆದಿದ್ದು, ಕೈ-ಕೈ ಮಿಲಾಯಿಸುವ ಹಂತಕ್ಕೆ ಬಂದ ಗುಂಪನ್ನು ಚದುರಿಸಲು ಬನ್ನಂಜೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಮೀಪ ಪೊಲೀಸರು ಲಾಠಿ ಪ್ರಹಾರ ನಡೆಸ ಬೇಕಾಯಿತು. ಸ್ವತಹ ಎಸ್ಪಿ ಲಕ್ಷ್ಮಣ್ ನಿಂಬರ್ಗಿ ಅವರೇ ಲಾಠಿಯನ್ನು ಹಿಡಿದು ಕಾರ್ಯಕರ್ತರ ಮೇಲೆ ದಂಡ ಪ್ರಹಾರ ನಡೆಸಿದರು.

ಇದೂ ಅಲ್ಲದೇ ಸರ್ವಿಸ್ ಬಸ್‌ನಿಲ್ದಾಣ, ಸಿಟಿ ಬಸ್ ನಿಲ್ದಾಣ, ರಥಬೀದಿ, ಕಲ್ಸಂಕ, ಕಡಿಯಾಳಿ, ಬನ್ನಂಜೆಗಳಲ್ಲಿ ತೆರೆದಿದ್ದ ಅಂಗಡಿಗಳನ್ನು ಮುಚ್ಚಿಸಲು ಕಾಂಗ್ರೆಸ್ ಕಾರ್ಯಕರ್ತರು ಬಲ ಪ್ರಯೋಗ ನಡೆಸಿದರೆಂದು ಕೆಲ ಅಂಗಡಿ ಗಳ ಮಾಲಕರು ಹಾಗೂ ಬಿೆಪಿ ಕಾರ್ಯಕರ್ತರು ಆರೋಪಿಸಿದರು.

ಜನಜೀವನ ಅಸ್ತವ್ಯಸ್ತ:

ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿತು. ಕೆಎಸ್ ಆರ್‌ಟಿಸಿ, ಎಕ್ಸ್‌ಪ್ರೆಸ್, ಸರ್ವಿಸ್ ಹಾಗೂ ಸಿಟಿ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಹೀಗಾಗಿ ಜನಸಂಚಾರ ತೀರಾ ವಿರಳವಾಗಿತ್ತು. ಇದರೊಂದಿಗೆ ಶಾಲಾ-ಕಾಲೇಜುಗಳಿಗೆ ಬಂದ್ ಹಿನ್ನೆಲೆ ಯಲ್ಲಿ ಜಿಲ್ಲಾಡಳಿತ ನಿನ್ನೆಯೇ ರಜೆಯನ್ನು ಘೋಷಿಸಿದ ಕಾರಣ ಇಂದು ಬಾಗಿಲು ತೆರೆಯಲಿಲ್ಲ.

ವಿಪಕ್ಷಗಳು ಕೇಂದ್ರ ಸರಕಾರದ ವಿರುದ್ಧ ಬಂದ್ ಕರೆ ನೀಡಿದ್ದರಿಂದ ಬಿಜೆಪಿ ಹಾಗೂ ಅದರ ಸಹಸಂಘಟನೆಗಳು ಬಂದ್‌ನ್ನು ವಿರೋಧಿಸಿದ್ದು, ಇದರಿಂದ ಬಿಜೆಪಿ ಬೆಂಬಲಿಗ ವ್ಯಾಪಾರಿಗಳು ಬೆಳಗಿನಿಂದಲೇ ತಮ್ಮ ಅಂಗಡಿ ಮುಂಗಟ್ಟು ಗಳನ್ನು ತೆರೆದಿದ್ದರು. ಜಿಲ್ಲೆಯಾದ್ಯಂತ ಇದು ಕಂಡು ಬಂದಿದ್ದು, ಜನಸಂಚಾರ ವಿರಳವಾಗಿ ವ್ಯವಹಾರ ಕುಸಿದರೂ ಅವರು ಬಂದ್ನ್ನು ಧಿಕ್ಕರಿಸಿ ವ್ಯಾಪಾರ ನಡೆಸಿದರು.

ಹೀಗೆ ಪ್ರತಿ ಗ್ರಾಮಗಳಲ್ಲಿ ಶೇ.30ರಿಂದ 40ರಷ್ಟು ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಎಲ್‌ಐಸಿ, ಬ್ಯಾಂಕುಗಳು, ಸರಕಾರಿ ಕಚೇರಿಗಳು, ಇತರ ವ್ಯವಹಾರ ಕೇಂದ್ರಗಳು ಎಂದಿನಂತೆ ಕಾರ್ಯನಿರ್ವಹಿಸಿದರೂ ವ್ಯವಹಾರ ಕಡಿಮೆ ಇತ್ತು. ಅರ್ಧದಷ್ಟು ಅಟೋರಿಕ್ಷಾ ಹಾಗೂ ಖಾಸಗಿ ವಾಹನಗಳು ಮಾ್ರ ರಸ್ತೆಗಳಲ್ಲಿ ಓಡಾಟ ನಡೆಸಿದವು.

ಬಹುತೇಕ ಹೊಟೇಲುಗಳು ತೆರೆದಿದ್ದು, ಕಚೇರಿಗೆ ಬಂದವರಿಗೆ ಊಟ-ತಿಂಡಿಗೆ ಸಮಸ್ಯೆಯಾಗಲಿಲ್ಲ. ಮೆಡಿಕಲ್ ಶಾಪ್, ಹಾಲಿನ ಬೂತ್‌ಗ ಳೊಂದಿಗೆ ಕೆಲ ಪೆಟ್ರೋಲ್ ಬಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿದವು. ಬೈಂದೂರು, ಕುಂದಾಪುರ, ಕೋಟ, ಸಾಲಿಗ್ರಾಮ, ಬ್ರಹ್ಮಾವರ, ಮಲ್ಪೆ, ಹಿರಿಯಡ್ಕಗಳಲ್ಲೂ ಶಾಂತಿಯುತ ಬಂದ್ ನಡೆಯಿತು.

ಪ್ರಯಾಣಿಕರ ಪರದಾಟ:

ಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಪರಿಣಾಮ ಹೊರ ಊರಿನಿಂದ ಬಂದಿಳಿದ ಪ್ರಯಾಣಿಕರು ಉಡುಪಿ ಬಸ್ ನಿಲ್ದಾಣದಲ್ಲಿ ತೀರಾ ತೊಂದರೆ ಅನುಭವಿಸಿದರು. ಇವರಲ್ಲಿ ಕಾಮಿಕರ್ರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಬೈಂದೂರಿನಲ್ಲಿ ಮಿಶ್ರ:

ಬೈಂದೂರಿನಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ದೊರಕಿದೆ. ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರೆ, ಶಾಲಾ-ಕಾಲೇಜು ಗಳು ಮುಚ್ಚಿದ್ದವು. ಆದರೆ ಶೇ.50ರಷ್ಟು ಅಂಗಡಿಗಳು ತೆರೆದಿದ್ದವು. ಮಾಜಿ ಶಾಸಕ ಗೋಪಾಲ ಪೂಜಾರಿ ನೇತೃತ್ವದಲ್ಲಿ ನೂರಾರು ಕಾಂಗ್ರೆಸಿಗರು ಬೈಂದೂರು ಜಂಕ್ಷನ್ ಬಳಿ ಕೇಂದ್ರದ ವಿರುದ್ಧ ಪ್ರತಿಭಟನಾ ಸಭೆ ನಡೆಸಿದರು. ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲಿದೆ. ಅಪರಾಹ್ನದ ಬಳಿಕ ಹೆಚ್ಚಿನೆಲ್ಲಾ ಅಂಗಡಿಗಳು ಬಾಗಿಲು ತೆರೆದವು.

ಉಳಿದಂತೆ ಉಪ್ಪುಂದ, ತ್ರಾಸಿ, ಗಂಗೊಳ್ಳಿ, ಗುಜ್ಜಾಡಿ, ಹೆಮ್ಮಾಡಿ, ತಲ್ಲೂರು, ಸಿದ್ದಾಪುರ, ಅಂಪಾರು, ಅಮಾಸೆಬೈಲು, ಶಂಕರ ನಾರಾಯಣ, ಕೊಂಡಳ್ಳಿ, ಹಾಲಾಡಿ, ಕೋಟೇಶ್ವರ, ತೆಕ್ಕಟ್ಟೆ, ಕುಂಭಾಶಿ, ಕೋಣಿ, ಈಡೂರು, ವಂಡ್ಸೆ, ಆಲೂರು, ಬಸ್ರೂರುಗಳಲ್ಲೂ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News