ಕುಂದಾಪುರದಲ್ಲಿ ಸಂಪೂರ್ಣ; ತಾಲೂಕಿನ ಉಳಿದೆಡೆ ಭಾಗಶ:

Update: 2018-09-10 14:42 GMT

ಕುಂದಾಪುರ, ಸೆ.10: ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್, ಜೆಡಿಎಸ್ ಹಾಗೂ ಇತರ ಪಕ್ಷಗಳು ಕರೆ ನೀಡಿದ್ದ ಭಾರತ ಬಂದ್‌ಗೆ ಕುಂದಾಪುರ ನಗರದಲ್ಲಿ ಉತ್ತಮ ಬೆಂಬಲ ವ್ಯಕ್ತವಾದರೂ ತಾಲೂಕಿನ ಉಳಿದೆಡೆ ಭಾಗಶ: ಬಂದ್ ಕಂಡುಬಂದಿದೆ.

ಕುಂದಾಪುರ ನಗರದೊಳಗೆ ಬೆಳಗಿನಿಂದಲೇ ಸರಕಾರಿ ಹಾಗೂ ಖಾಸಗಿ ಬಸ್‌ಗಳ ಓಡಾಟ ಇರಲಿಲ್ಲ. ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ದರಿಂದ ವಿದ್ಯಾರ್ಥಿಗಳ ಸೋಮವಾರದ ಗಿಜಿಗಿಜಿ ಓಡಾಟವೂ ಇರಲಿಲ್ಲ. ಹೊಟೇಲ್ ಸೇರಿದಂತೆ ನಗರದ ಬಹುತೇಕ ಅಂಗಡಿ ಮುಂಗಟ್ಟುಗಳು ಬೆಳಗ್ಗೆ ತೆರೆಯಲೇ ಇಲ್ಲ. ಆದರೆ 9:30ರ ವೇಳೆಗೆ ಕೆಲವು ಅಂಗಡಿಗಳು ಬಾಗಿಲು ತೆರೆಯಲಾ ರಂಭಿಸಿದಾಗ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಮೆರವಣಿಗೆ ಮೂಲಕ ತೆರಳಿ ಅಂಗಡಿ ಮುಚ್ಚಿ ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿದರು. ಬಳಿಕ ಎಲ್ಲ ಅಂಗಡಿಗಳನ್ನು ಮುಚ್ಚಲಾಯಿತು. ಬಂದ್‌ಗೆ ಜೆಡಿಎಸ್ ಸಹ ಪೂರ್ಣ ಬೆಂಬಲ ನೀಡಿತ್ತು.

ಕುಂದಾಪುರ ನಗರದೊಳಗೆ ಬೆಳಗಿನಿಂದಲೇ ಸರಕಾರಿ ಹಾಗೂ ಖಾಸಗಿ ಬಸ್‌ಗಳ ಓಡಾಟ ಇರಲಿಲ್ಲ. ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ದರಿಂದ ವಿದ್ಯಾರ್ಥಿಗಳ ಸೋಮವಾರದ ಗಿಜಿಗಿಜಿ ಓಡಾಟವೂ ಇರಲಿಲ್ಲ. ಹೊಟೇಲ್ ಸೇರಿದಂತೆ ನಗರದ ಬಹುತೇಕ ಅಂಗಡಿ ಮುಂಗಟ್ಟುಗಳು ಬೆಳಗ್ಗೆ ತೆರೆಯಲೇ ಇಲ್ಲ. ಆದರೆ 9:30ರ ವೇಳೆಗೆ ಕೆಲವು ಅಂಗಡಿಗಳು ಬಾಗಿಲು ತೆರೆಯಲಾ ರಂಭಿಸಿದಾಗ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಮೆರವಣಿಗೆ ಮೂಲಕ ತೆರಳಿ ಅಂಗಡಿ ಮುಚ್ಚಿ ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿದರು.

ಬಳಿಕ ಎಲ್ಲ ಅಂಗಡಿಗಳನ್ನು ಮುಚ್ಚಲಾಯಿತು. ಬಂದ್‌ಗೆ ಜೆಡಿಎಸ್ ಸಹ ಪೂರ್ಣ ಬೆಂಬಲ ನೀಡಿತ್ತು. ಬಂದ್‌ನಿಂದಾಗಿ ಯಾವುದೇ ಖಾಸಗಿ ಹಾಗೂ ಸರಕಾರಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ಇದರಿಂದ ದೂರದೂರಿನ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು. ಕುಂದಾಪುರ ಕೆಎಸ್ಸಾರ್ಟಿಸಿ ಡಿಪೋದಿಂದ ಸಂಜೆ ವರೆಗೆ ಯಾವುದೇ ಬಸ್‌ಗಳು ಸಂಚರಿಸಲಿಲ್ಲ. ಬೆಳಗ್ಗೆ ಧರ್ಮಸ್ಥಳ ಡಿಪೋದಿಂದ ಉತ್ತರಕರ್ನಾಟಕದ ಕಡೆಗೆ ತೆರಳುವ ಎರಡು ಬಸ್‌ಗಳು ಬಂದಿದ್ದು, ಅವುಗಳನ್ನು ಕುಂದಾಪುರದಲ್ಲೇ ತಡೆದು ನಿಲ್ಲಿಸಲಾಗಿತ್ತು. ಇದರಿಂದ ಹಾವೇರಿ, ಕುಮಟಾ, ಹೊನ್ನಾವರ ಕಡೆಗೆ ಹೋಗುವ ಜನರು ಪರದಾಟ ನಡೆಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕಾಂಗ್ರೆಸ್ ನಾಯಕ ರಾದ ವಿಕಾಸ್ ಹೆಗ್ಡೆ, ಪುರಸಭೆ ಸದಸ್ಯರಾದ ದೇವಕಿ ಸಣ್ಣಯ್ಯ, ಚಂದ್ರಶೇಖರ ಖಾರ್ವಿ, ಶ್ರೀಧರ ಶೇರೆಗಾರ್, ಮಾಜಿ ಸದಸ್ಯ ಪ್ರಭಾಕರ ಕೋಡಿ, ಕೇಶವ ಭಟ್, ಗಣೇಶ್ ಶೇರೆಗಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ರಿಕ್ಷಾ ಕಾರು ಮೆಟಡೋರ್ ಚಾಲಕರ ಸಂಘದ ಗೌರವಾಧ್ಯಕ್ಷ ಜಾಕೋಬ್ ಡಿಸೋಜಾ ಮುಂತಾದವರು ನಗರದಲ್ಲಿ ಮೆರವಣಿಗೆ ನಡೆಸಿದರು.
ಡಿವೈಎಸ್‌ಪಿ ಬಿ.ಪಿ.ದಿನೇಶ್ ಕುಮಾರ್ ನೇತೃತ್ವದಲ್ಲಿ ನಗರದಲ್ಲಿ ಬಿಗು ಭದ್ರತೆಯನ್ನು ಏರ್ಪಡಿಸಲಾಗಿತ್ತು.

ಉಳಿದೆಡೆ ಮಿಶ್ರ: ಕಾಂಗ್ರೆಸ್ ಹಾಗೂ ವಿವಿಧ ಪಕ್ಷಗಳು, ಸಂಘಟನೆಗಳು ಕರೆ ನೀಡಿರುವ ಸೋಮವಾರದ ರಾಷ್ಟ್ರವ್ಯಾಪಿ ಬಂದ್‌ಗೆ ಗಂಗೊಳ್ಳಿ, ಹೆಮ್ಮಾಡಿ, ತಲ್ಲೂರು ಭಾಗದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗಂಗೊಳ್ಳಿ ಭಾಗದಲ್ಲಿ ಬೆರಳೆಣಿಕೆಯಷ್ಟು ಅಂಗಡಿ- ಮುಂಗಟ್ಟುಗಳನ್ನು ಮುಚ್ಚಿ, ವರ್ತಕರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು. ಹೋಟೆಲ್, ಬ್ಯಾಂಕ್‌ಗಳು ತೆರೆದಿದ್ದವು. ಅವರ ವ್ಯಾಪಾರ- ಹಿವಾಟಿಗೆ ಯಾವುದೇ ತೊಂದರೆಯಾಗಿಲ್ಲ.

ಕಾರ್ಯಕರ್ತರು-ಪೊಲೀಸರ ನಡುವೆ ಮಾತಿನ ಚಕಮಕಿ

ಬಂದ್ ಕರೆ ಹೊರತಾಗಿಯೂ ಕುಂದಾಪುರದಲ್ಲಿ ಕೆಲವು ವ್ಯಾಪಾರಸ್ಥರು ಅಂಗಡಿಗಳನ್ನು ಮುಚ್ಚದೇ ಇರುವುದನ್ನು ಗಮನಿಸಿದ ಕಾಂಗ್ರೆಸ್ ಕಾರ್ಯಕರ್ತರು ಬಲವಂತಾಗಿ ಮುಚ್ಚಿಸಲು ಪ್ರಯತ್ನಿಸುತ್ತಿರುವುದರ ವಿರುದ್ಧ ಕುಂದಾಪುರ ಎಸ್‌ಐ ಹರೀಶ್ ಆಕ್ಷೇಪ ವ್ಯಕ್ತಪಡಿಸಿದರು. ಇದು ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ಬಂದ್ ಕರೆ ಹೊರತಾಗಿಯೂ ಕುಂದಾಪುರದಲ್ಲಿ ಕೆಲವು ವ್ಯಾಪಾರಸ್ಥರು ಅಂಗಡಿಗಳನ್ನು ಮುಚ್ಚದೇ ಇರುವುದನ್ನು ಗಮನಿಸಿದ ಕಾಂಗ್ರೆಸ್ ಕಾರ್ಯಕರ್ತರು ಬಲವಂತಾಗಿ ಮುಚ್ಚಿಸಲು ಪ್ರಯತ್ನಿಸುತ್ತಿರುವುದರ ವಿರುದ್ಧ ಕುಂದಾಪುರ ಎಸ್‌ಐ ಹರೀಶ್ ಆಕ್ಷೇಪ ವ್ಯಕ್ತಪಡಿಸಿದರು. ಇದು ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಕಾಂಗ್ರೆಸ್ ಕಾರ್ಯಕರ್ತರ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಎಸ್‌ಐ ಹರೀಶ್, ವರ್ತಕರೇ ಸ್ವಯಂಪ್ರೇರಿತವಾಗಿ ಬಂದ್‌ಗೆ ಬೆಂಬಲಿಸಿದರೆ ಅಭ್ಯಂತರ ವಿಲ್ಲ. ಆದರೆ ಬಲವಂತವಾಗಿ ಯಾವ ಅಂಗಡಿ, ಹೋಟೆಲ್‌ಗಳನ್ನು ಮುಚ್ಚಿಸುವುದು ಸರಿಯಲ್ಲ ಎಂದರು. ಈ ವೇಳೆ ಕೆಲ ಹೊತ್ತು ಎಸ್‌ಐ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆಯಿತು.

ಕಾಂಗ್ರೆಸ್ ಕಾರ್ಯಕರ್ತರ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಎಸ್‌ಐ ಹರೀಶ್, ವರ್ತಕರೇ ಸ್ವಯಂಪ್ರೇರಿತವಾಗಿ ಬಂದ್‌ಗೆ ಬೆಂಬಲಿಸಿದರೆ ಅ್ಯಂತರವಿಲ್ಲ.ಆದರೆಬಲವಂತವಾಗಿಯಾವಅಂಗಡಿ,ಹೋಟೆಲ್‌ಗಳನ್ನುಮುಚ್ಚಿಸುವುದುಸರಿಯಲ್ಲಎಂದರು.ಈವೇಳೆಕೆಲಹೊತ್ತುಎಸ್‌ಐಹಾಗೂಕಾಂಗ್ರೆಸ್‌ಕಾರ್ಯಕರ್ತರಮ್ಯೆ ವಾಗ್ವಾದ ನಡೆಯಿತು. ಬಳಿಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಮತ್ತಿತರ ಪ್ರಮುಖ ನಾಯಕರು ಎಸ್‌ಐ ಜತೆ ಮಾತನಾಡಿ, ಬಲವಂತಾಗಿ ಯಾವ ಅಂಗಡಿಗಳನ್ನು ಮುಚ್ಚುಸುತ್ತಿಲ್ಲ ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News