ಹಿರಿಯಡಕ: ರಾಷ್ಟ್ರೀಯ ಸೇವಾ ಯೋಜನೆ ಘಟಕ ಉದ್ಘಾಟನೆ

Update: 2018-09-10 15:25 GMT

ಉಡುಪಿ, ಸೆ.10: ಹಿರಿಯಡಕದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 2018-19ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ಉದ್ಘಾಟನೆ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಸಂಗೀತ ಅಧೀಕ್ಷಕಿ ಚಂಪಕ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ, ಸೇವಾ ಮನೋಭಾವ, ಸಮಯ ಪಾಲನೆಯನ್ನು ಜಾಗೃತಗೊಳಿಸಿ ವ್ಯಕ್ತಿತ್ವ ವಿಕಸನ ಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ್ ಡಾ.ನಿಕೇತನ ಮಾತನಾಡಿ, ಎನ್ನೆಸ್ಸೆಸ್ ಯೋಜನಾಧಿಕಾರಿಯಾಗಿ ಸಲ್ಲಿಸಿದ ಸೇವೆಯ ಅನುಭವಗಳನ್ನು ಹಂಚಿ ಕೊಂಡರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಸುಜಯಾ ಕೆ.ಎಸ್., ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರವೀಣ್ ಶೆಟ್ಟಿ, ಸುಭಾಷ್ ಹೆಚ್. ಕೆ., ವಿದ್ಯಾರ್ಥಿ ನಾಯಕರಾದ ಅವಿನಾಶ್, ಸಾಕ್ಷಿತಾ, ವಿಜೇತ ಉಪಸ್ಥಿತರಿದ್ದರು.

ಸುಭಾಷ್ ಹೆಚ್.ಕೆ. ಸ್ವಾಗತಿಸಿ ಪ್ರವೀಣ ಶೆಟ್ಟಿ ವಂದಿಸಿದರು. ರಾಹುಲ್ ಕೆ. ಎಸ್. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News