ಪೊಲೀಸ್ ವ್ಯವಸ್ಥೆಯನ್ನು ಬಳಸಿಕೊಂಡು ಬಲವಂತದ ಬಂದ್: ನಳಿನ್ ಕುಮಾರ್ ಕಟೀಲ್

Update: 2018-09-10 15:28 GMT

ಮಂಗಳೂರು, ಸೆ. 10: ಕರಾವಳಿಯಲ್ಲಿ ಕಾಂಗ್ರೆಸ್ ಪೊಲೀಸ್ ವ್ಯವಸ್ಥೆಯನ್ನು ಬಳಸಿಕೊಂಡು, ಅಧಿಕಾರವನ್ನು ದುರಪಯೋಗಪಡಿಸಿಕೊಂಡು ಬಲವಂತದ ಬಂದ್ ನಡೆಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.

ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಬಂದ್ ನಡೆಸಲು ಸರಕಾರಿ ಯಂತ್ರವನ್ನು ಬಳಸಿಕೊಂಡಿದೆ. ಮಂಗಳೂರು ಮತ್ತು ಬಂಟ್ವಾಳದಲ್ಲಿ ಮಾಜಿ ಶಾಸಕರು ಮುಂದೆ ನಿಂತು ಬಲವಂತವಾಗಿ ಬಂದ್ ಮಾಡಿಸುವ ಕೆಲಸ ಮಾಡಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.

ನ್ಯಾಯಾಲಯದ ತೀರ್ಪಿನ ಪ್ರಕಾರ ಬಂದ್‌ಗೆ ಕರೆ ನೀಡಿದವರು ಆ ಸಂದರ್ಭದಲ್ಲಿ ನಡೆದಿರುವ ನಷ್ಟವನ್ನು ಭರಿಸಬೇಕಾಗಿದೆ, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಗಿರುವ ನಷ್ಟವನ್ನು ಕಾಂಗ್ರೆಸ್ ಭರಿಸಬೇಕಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಬಜೆಪಿ ಮುಖಂಡರ ಮೇಲೆ ಹಲ್ಲೆ ನಡೆದಿದೆ. ಬಂಟ್ವಾಳದಲ್ಲಿ ಶಾಸಕರ ವಾಹನದ ಮೇಲೆ ಕಲ್ಲೆಸೆದು ಕೊಲೆಯತ್ನ ನಡೆದಿದೆ ಎಂದು ಸಂಸದ ನಳಿನ್ ಕುಮಾರ್ ಆರೋಪಿಸಿದ್ದಾರೆ.

ಪೆಟ್ರೋಲ್ ಬೆಲೆ ಇಳಿಕೆಯಾಗ ಬೇಕಾದರೆ ರಾಜ್ಯ ಸರಕಾರ ಸೆಸ್ ಹಿಂದಕ್ಕೆ ಪಡೆಯಬೇಕು. ರಾಜಸ್ಥಾನದಲ್ಲಿ ಇರುವ ರಾಜ್ಯ ಸರಕಾರ ಈ ರೀತಿಯ ಕ್ರಮ ಕೈಗೊಂಡಿದೆ ಎಂದು ಸಂಸದ ನಳಿನ್ ಕುಮಾರ್ ತಿಳಿಸಿದ್ದಾರೆ.

ಶಾಸಕರಾದ ಡಾ. ಭರತ್ , ವೇದವ್ಯಾಸ ಕಾಮತ್, ರಾಜೇಶ್ ನಾಯ್ಕಾ ಹಾಗೂ ಬಿಜೆಪಿ ಮುಖಂಡರಾದ ರವಿ ಶಂಕರ್ ಮಿಜಾರ್, ಕಿಶೋರ್ ರೈ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News