ಎನ್ನೆಸ್ಸೆಸ್‌ನಿಂದ ಬದುಕಿನ ಶಿಕ್ಷಣ ಪಡೆಯಲು ಸಾಧ್ಯ: ಸುರೇಂದ್ರನಾಥ್ ಶೆಟ್ಟಿ

Update: 2018-09-11 12:53 GMT

ಉಡುಪಿ, ಸೆ.11: ಕಾಲೇಜಿನ ನಾಲ್ಕು ಗೋಡೆಗಳ ನಡುವಿನ ಶಿಕ್ಷಣ ಪದವಿ ಗಳಿಗೆ ಮಾತ್ರ ಸೀಮಿತವಾಗಿದ್ದು, ನೈಜ ಬದುಕನ್ನು ಎದುರಿಸುವ ಕಲೆ ಎನ್ನೆಸ್ಸೆಸ್ ಕಾರ್ಯಚಟುವಟಿಕೆಗಳಿಂದ ಪಡೆಯಲು ಸಾಧ್ಯ ಎಂದು ಉಡುಪಿ ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದ್ದಾರೆ.

ಉಡುಪಿ ವೈಕುಂಠ ಬಾಳಿಗ ಕಾನೂನು ಕಾಲೇಜು ಹಾಗೂ ಹುಬ್ಬಳ್ಳಿ ಕಾನೂನು ವಿಶ್ವವಿದ್ಯಾಲಯಗಳ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಕಾಲೇಜಿನ ಎನ್ನೆಸ್ಸೆಸ್ ಘಟಕಗಳನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮನಪೂರ್ತಿಯಾಗಿ ಎನ್ನೆಸ್ಸೆಸ್‌ನಲ್ಲಿ ತೊಡಗಿಸಿಕೊಂಡಾಗ ಮಾತ್ರ ಇಂತಹ ಅನುಭವ ದೊರೆಯಲು ಸಾಧ್ಯ. ಬದುಕನ್ನು ರೂಪಿಸುವಲ್ಲಿ ಎನ್ನೆಸ್ಸೆಸ್ ಒಂದು ಉತ್ತಮ ಶೈಕ್ಷಣಿಕ ವೇದಿೆ ಎಂದು ಅವರು ಅಭಿಪ್ರಾಯ ಪಟ್ಟರು.

ಮನಪೂರ್ತಿಯಾಗಿ ಎನ್ನೆಸ್ಸೆಸ್‌ನಲ್ಲಿ ತೊಡಗಿಸಿಕೊಂಡಾಗ ಮಾತ್ರ ಇಂತಹ ಅನುವದೊರೆಯಲುಸ್ಯಾ. ಬದುಕನ್ನು ರೂಪಿಸುವಲ್ಲಿ ಎನ್ನೆಸ್ಸೆಸ್ ಒಂದು ಉತ್ತಮ ಶೈಕ್ಷಣಿಕ ವೇದಿಕೆ ಎಂದು ಅವರು ಅಭಿಪ್ರಾಯ ಪಟ್ಟರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಪ್ರಕಾಶ್ ಕಣಿವೆ ವಹಿಸಿದ್ದರು. ವೇದಿಕೆಯಲ್ಲಿ ಎನ್ನೆಸ್ಸೆಸ್ ಯೋಜನಾಧಿಕಾರಿ ಪ್ರೊ.ಸುರೇಖಾ ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕಿ ಶ್ವೀನಿ ಜೇಸಿಮಾ ಡಿಸೋಜ ಸ್ವಾಗತಿಸಿದರು. ಸುರೇಶ ವಂದಿಸಿದರು. ಪ್ರಸೂದ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News