‘ಚಿಟ್ಟಾಣಿಯವರ ಕೊನೆಯ ದಿನಗಳು’ ಕೃತಿ ಅನಾವರಣ

Update: 2018-09-11 12:59 GMT

ಉಡುಪಿ, ಸೆ.11: ಸುಮಾರು ಏಳು ದಶಕಗಳ ಕಾಲ ದಣಿವರಿಯದೇ ವೇಷ ಕಟ್ಟಿ ಕುಣಿದ ಪದ್ಮಶ್ರೀ ಪ್ರಶಸ್ತಿ ವಿಜೇತ ಯಕ್ಷ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ನಮ್ಮನ್ನಗಲಿ ವರ್ಷವಾಗುತ್ತಾ ಬಂದಿದ್ದು, ಅವರ ಕೊನೆಯ ದಿನಗಳ ಕುರಿತು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ಉಪನ್ಯಾಸಕರಾದ ಶಿವಕುಮಾರ ಬಿ.ಎ.ಅಳಗೋಡು ಕೃತಿಯೊಂದನ್ನು ರಚಿಸಿದ್ದು, ಅದೀಗ ಬಿಡುಗಡೆಗೆ ಸಿದ್ಧಗೊಂಡಿದೆ.

ಚಿಟ್ಟಾಣಿ ಇಹಲೋಕದಿಂದ ದೂರಸರಿದರೂ, ಯಕ್ಷಗಾನ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರ. ಮೊಟ್ಟ ಮೊದಲ ಬಾರಿಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಭಿಜಾತ ಕಲಾವಿದರಿವರು. ಚಿಟ್ಟಾಣಿ ಅವರ ಜೀವಿತದ ಕೊನೆಯ ದಿನಗಳ ಚಿತ್ರಸಹಿತ ವಿವರಗಳನ್ನು ಈ ಕೃತಿ ಒಳಗೊಂಡಿದ್ದು, ಕೆಲವೇ ದಿನಗಳಲ್ಲಿ ಲೋಕಾರ್ಪಣೆ ಗೊಳ್ಳಲಿದೆ.

ಚಿಟ್ಟಾಣಿ ಇಹಲೋಕದಿಂದ ದೂರಸರಿದರೂ, ಯಕ್ಷಗಾನ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರ. ಮೊಟ್ಟ ಮೊದಲ ಬಾರಿಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಭಿಜಾತ ಕಲಾವಿದರಿವರು. ಚಿಟ್ಟಾಣಿ ಅವರ ಜೀವಿತದ ಕೊನೆಯ ದಿನಗಳ ಚಿತ್ರಸಹಿತ ವಿವರಗಳನ್ನು ಈ ಕೃತಿ ಒಳಗೊಂಡಿದ್ದು, ಕೆಲವೇ ದಿನಗಳಲ್ಲಿ ಲೋಕಾರ್ಪಣೆ ಗೊಳ್ಳಲಿದೆ. ರಾಮಚಂದ್ರ ಹೆಗಡೆ ಅವರ ಬದುಕಿನ ಕೊನೆಗಾಲದ ಕೆಲವು ಸ್ವಾರಸ್ಯಕರ ಘಟನೆಗಳು, ಅಂತಿಮ ಕ್ಷಣದ ಸಂಗತಿಗಳೆಲ್ಲವನ್ನೂ ಈ ಪುಸ್ತಕ ಒಳಗೊಂಡಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಹೆಗಡೆಯವರ ಕೊನೆಯ ದಿನಗಳು ದಾಖಲೆಯಾಗಿ ಉಳಿಯಬೇಕೆಂಬ ಸದುದ್ಧೇಶದಿಂದ ಈ ಕೃತಿಯನ್ನು ರಚಿಸಿರುವುಾಗಿ ಲೇಖಕ ಶಿವಕುಮಾರ್ ತಿಳಿಸಿದ್ದಾರೆ.

ರಾಮಚಂದ್ರ ಹೆಗಡೆ ಅವರ ಬದುಕಿನ ಕೊನೆಗಾಲದ ಕೆಲವು ಸ್ವಾರಸ್ಯಕರ ಘಟನೆಗಳು, ಅಂತಿಮ ಕ್ಷಣದ ಸಂಗತಿಗಳೆಲ್ಲವನ್ನೂ ಈ ಪುಸ್ತಕ ಒಳಗೊಂಡಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಹೆಗಡೆಯವರ ಕೊನೆಯ ದಿನಗಳು ದಾಖಲೆಯಾಗಿ ಉಳಿಯಬೇಕೆಂಬ ಸದುದ್ಧೇಶದಿಂದ ಈ ಕೃತಿಯನ್ನು ರಚಿಸಿರುವುದಾಗಿ ಲೇಖಕ ಶಿವಕುಮಾರ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News