ಮಣೂರು: ಅನ್ನಭಾಗ್ಯದ ಅಕ್ಕಿ ರೈಸ್‌ಮಿಲ್‌ನಲ್ಲಿ ದಾಸ್ತಾನು

Update: 2018-09-11 15:22 GMT

ಕೋಟ, ಸೆ.11: ಅನ್ನಭಾಗ್ಯದ ಅಕ್ಕಿ ಖರೀದಿಸಿ ದಾಸ್ತಾನು ಇರಿಸಿಕೊಂಡಿರುವ ಬಗ್ಗೆ ಮಣೂರು ಗ್ರಾಮದ ವಿಜಯಾ ರೈಸ್ ಮಿಲ್ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಾ ರೈಸ್‌ಮಿಲ್ ನಲ್ಲಿ ಅನ್ನಭಾಗ್ಯದ ಅಕ್ಕಿ ಖರೀದಿಸಿ ಮಾರಾಟ ಮಾಡುವ ಕುರಿತು ಸಾರ್ವಜನಿಕರು ಉಡುಪಿ ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಉಡುಪಿಯ ಆಹಾರ ನಿರೀಕ್ಷಕಿ ಪಾರ್ವತಿ, ಆಹಾರ ಉಪನಿರ್ದೇಶಕರ ಹಾಗೂ ಇಲಾಖಾ ಸಿಬ್ಬಂದಿಯವರ ಸಮ್ಮುಖದಲ್ಲಿ ಸೆ.10ರಂದು ಮಧ್ಯಾಹ್ನ 2ಗಂಟೆಗೆ ಮಣೂರು ಗ್ರಾಮದ ವಿಜಯಾ ರೈಸ್ ಮಿಲ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ರೈಸ್‌ಮಿಲ್‌ನಲ್ಲಿ 136 ಚೀಲ (55 ಕ್ವಿಂಟಾಲ್ 49ಕೆಜಿ) ಅನ್ನ ಭಾಗ್ಯದ ಅಕ್ಕಿ ಹಾಗೂ 44 ಕೆ.ಜಿ ಕ್ಷೀರ ಭಾಗ್ಯದ ಹಾಲಿನ ಹುಡಿ ಪ್ಯಾಕೆಟ್ ಗಳು ದಾಸ್ತಾನು ಇರುವುದು ಕಂಡು ಬಂದಿರುವುದಾಗಿ ಕೋಟ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News