ಗಣೇಶ ಚತುರ್ಥಿ: ಕೊಂಕಣ ರೈಲ್ವೆಯಿಂದ ವಿಶೇಷ ರೈಲು

Update: 2018-09-11 15:26 GMT

ಉಡುಪಿ, ಸೆ.11: ಈ ಬಾರಿಯ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಪ್ರಯಾಣಿಕರ ನೂಕುನುಗ್ಗಲನ್ನು ತಪ್ಪಿಸಲು ಕೊಂಕಣ ರೈಲ್ವೆ, ಕೇಂದ್ರ ಹಾಗೂ ಪಶ್ಚಿಮ ರೈಲ್ವೆಗಳ ಸಹಯೋಗದೊಂದಿಗೆ 202 ವಿಶೇಷ ರೈಲುಗಳನ್ನು ಓಡಿಸಲಿವೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮುಂಬೈ, ಪುಣೆ, ಅಜ್ನಿ, ಅಹಮದಾಬಾದ್‌ಗಳಿಂದ ಈ ವಿಶೇಷ ರೈಲುಗಳು ರತ್ನಗಿರಿ, ಸಾವಂತವಾಡಿ, ಝರಾಪ್, ತೀವಿಂ, ಮಡಗಾಂವ್ ಹಾಗೂ ಮಂಗಳೂರಿಗೆ ಸಂಚರಿಸಲಿವೆ. ಕೆಲವು ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಸೇರಿಸಲಾಗುವುದು ಎಂದೂ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News