ಉಡುಪಿ: ಹಾನಿಗೊಂಡ ಮನೆಗಳಿಗೆ ಪರಿಹಾರಕ್ಕೆ ಐಎಸ್‌ಪಿಆರ್‌ಎಲ್ ನಕಾರ

Update: 2018-09-12 13:56 GMT

ಉಡುಪಿ, ಸೆ.12: ಪಾದೂರಿನ ಭಾರತೀಯ ಕಚ್ಛಾ ತೈಲಗಾರ ಸಂಗ್ರಹಣಾ ಯೋಜನೆ (ಐಎಸ್‌ಪಿಆರ್‌ಎಲ್) ಯೋಜನೆಯ ಕಚ್ಛ ತೈಲ ಸಾಗಾಟ ಪೈಪ್‌ಲೈನ್ ಕಾಮಗಾರಿಯ ವೇಳೆ ಬಂಡೆಯ ಸ್ಪೋಟದಿಂದ ಹಾನಿಗೊಳಗಾದ ಸುಮಾರು 150 ಮನೆಗಳಿಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಕಂಪೆನಿ ಲಿಖಿತವಾಗಿ ತಿಳಿಸಿದೆ ಎಂದು ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ತಿಳಿಸಿದ್ದಾರೆ.

ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಮಜೂರು ಗ್ರಾಪಂ ಅಧ್ಯಕ್ಷ ಸಂದೀಪ್ ರಾವ್ ವಿಷಯ ಪ್ರಸ್ತಾಪಿಸಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತಿದ್ದರು.

ಐಎಸ್‌ಪಿಆರ್‌ಎಲ್ ಸ್ಫೋಟದಿಂದ ಅನೇಕ ಮನೆಗಳಿಗೆ ಹಾನಿಯಾಗಿದೆ. ತಹಶೀಲ್ದಾರ್ ವರದಿ ನೀಡಿ ವರ್ಷವಾದರೂ ಪರಿಹಾರ ಲಭಿಸಿಲ್ಲ. ಈ ಬಗ್ಗೆ ನಿರ್ಣಯ ಕೈಗೊಂಡು ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಗಳಿಗೆ ಪ್ರತಿಯನ್ನು ಕಳುಹಿಸುವಂತೆ ರಾವ್ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್, ಕಂಪೆನಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಲಿಖಿತವಾಗಿ ನೀಡಿದೆ. ಆದರೂ ಶಾಸಕರು ಮತ್ತು ಸ್ಥಳೀಯರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ್ದು, ಕಂಪೆನಿಯ ಎಂಡಿಗೆ ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದಾರೆ ಎಂದರು.

ಗ್ರಾಪಂ ಕಚೇರಿಯಲ್ಲಿ ಪಡಿತರ ಚೀಟಿ ಖಾತೆಯಲ್ಲಿ ಸಂಗ್ರಹವಾಗಿರುವ ಹಣವನ್ನು ಗ್ರಾಪಂ ಅಭಿವೃದ್ಧಿಗೆ ಬಳಸಿಕೊಳ್ಳಬಹುದು. ಈ ಬಗ್ಗೆ ಸರಕಾರದ ಸುತ್ತೋಲೆಯನ್ನು ಗ್ರಾಪಂಗಳಿಗೆ ಕಳುಹಿಸಲಾಗುವುು ಎಂದು ತಹಶೀಲ್ದಾರ್ ಹೇಳಿದರು.

ಗ್ರಾಪಂ ಕಚೇರಿಯಲ್ಲಿ ಪಡಿತರ ಚೀಟಿ ಖಾತೆಯಲ್ಲಿ ಸಂಗ್ರಹವಾಗಿರುವ ಹಣವನ್ನು ಗ್ರಾಪಂ ಅಭಿವೃದ್ಧಿಗೆ ಬಳಸಿಕೊಳ್ಳಬಹುದು. ಈ ಬಗ್ಗೆ ಸರಕಾರದ ಸುತ್ತೋಲೆಯನ್ನು ಗ್ರಾಪಂಗಳಿಗೆ ಕಳುಹಿಸಲಾಗುವುದು ಎಂದು ತಹಶೀಲ್ದಾರ್ ಹೇಳಿದರು. ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಸದಸ್ಯ ಸುಧೀರ್ ಕುಮಾರ್ ಶೆಟ್ಟಿ, ಪಡಿತರ ಚೀಟಿಗಾಗಿ ಅರ್ಜಿ ಸ್ವೀಕಾರ, ವಿಳಾಸ ಬದಲಾವಣೆ, ನೂತನ ಕಾರ್ಡ್ ವಿತರಣೆಗೆ ಸಾರ್ವಜನಿಕರಿಂದ ಸಂಗ್ರಹಿಸುವ ಹಣ ಪ್ರತ್ಯೇಕ ಖಾತೆಯಲ್ಲಿ ಜಮೆಯಾಗಿದ್ದು, ಇದನ್ನು ಯಾವ ಉದ್ದೇಶಕ್ಕೆ ಬಳಕೆ ಮಾಡಬಹುದು ಎಂಬ ಪ್ರಶ್ನೆಗೆ ತಹಶೀಲ್ದಾರ್ ಉತ್ತರಿಸಿದರು.

ಈ ಬಗ್ಗೆ ವಿಷಯ ಪ್ರಸ್ತಾಪಿಸಿದ ಸದಸ್ಯ ಸುಧೀರ್ ಕುಮಾರ್ ಶೆಟ್ಟಿ, ಪಡಿತರ ಚೀಟಿಗಾಗಿ ಅರ್ಜಿ ಸ್ವೀಕಾರ, ವಿಳಾಸ ಬದಲಾವಣೆ, ನೂತನ ಕಾರ್ಡ್ ವಿತರಣೆಗೆ ಸಾರ್ವಜನಿಕರಿಂದ ಸಂಗ್ರಹಿಸುವ ಹಣ ಪ್ರತ್ಯೇಕ ಖಾತೆಯಲ್ಲಿ ಜಮೆಯಾಗಿದ್ದು, ಇದನ್ನು ಯಾವ ಉದ್ದೇಶಕ್ಕೆ ಬಳಕೆ ಮಾಡಬಹುದು ಎಂಬ ಪ್ರಶ್ನೆಗೆ ತಹಶೀಲ್ದಾರ್ ಉತ್ತರಿಸಿದರು. ಸದಸ್ಯೆ ನೀತಾ ಗುರುರಾಜ್ ಮಾತನಾಡಿ, ಕಾಪು ವ್ಯಾಪ್ತಿಯಲ್ಲಿ ತಹಶೀಲ್ದಾರ್ ಆದಾಯ ಪ್ರಮಾಣ ಪತ್ರಕ್ಕೆ ಶಾಲಾ ದಾಖಲಾತಿಯನ್ನು ಕೇಳುತಿದ್ದಾರೆ. ಶಾಲೆಗೆ ಹೋಗದವರು ಹೇಗೆ ಪ್ರಮಾಣ ಪತ್ರ ಪಡೆಯಬೇಕು ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್, ಮನೆಯ ಯಾವುದೇ ಸದಸ್ಯರ ಅಥವಾ ಮಕ್ಕಳ ಶಾಲಾ ದಾಖಲಾತಿ ಸಲ್ಲಿಸಿ ಆದಾಯ ಪ್ರಮಾಣ ಪತ್ರ ಪಡೆಯಬಹುದು ಎಂದರು.

ಪಡುಬಿದ್ರಿಯಲ್ಲಿ ಸಣ್ಣ ಮತ್ತು ಬೃಹತ್ ಕೈಗಾರಿಕೆಗಳಿವೆ. ಆದರೆ ಗ್ರಾಪಂಗೆ ಇವು ಯಾವುದೇ ತೆರಿಗೆಯನ್ನು ಪಾವತಿಸುತ್ತಿಲ್ಲ. ನಾವು ಕೇವಲ ಹೊಗೆ ತಿನ್ನಲು ಮಾತ್ರವೇ? ಇತ್ತೀಚೆಗೆ ಉಡುಪಿ ಸೇರಿದಂತೆ ಅನೇಕ ಕಡೆಗಳಲ್ಲಿ ಸುರಿದ ಬೂದಿ ಮಳೆ ಕುರಿತೂ ತನಿಖೆಯಾಗಬೇಕು ಎಂದು ದಿನೇಶ್ ಕೋಟ್ಯಾನ್ ಆಗ್ರಹಿಸಿ ದರು. ಇದಕ್ಕೆ ಉತ್ತರಿಸಿದ ಇಒ ಮೋಹನ್‌ರಾಜ್, ಎಲ್ಲರೂ ಗ್ರಾಪಂಗೆ ತೆರಿಗೆ ಪಾವತಿಸಬೇಕು. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.

ಕುತ್ಯಾರು ಗ್ರಾಪಂ ವ್ಯಾಪ್ತಿಯ ಗುರ್ಮೆ ಎಂಬಲ್ಲಿ ಮರದ ದಿಮ್ಮಿಗಳು ಹರಿದು ಬಂದು ಮಳೆಗಾಲದಲ್ಲಿ ಸೇತುವೆಗೆ ಹಾನಿಯಾಗಿದೆ. ದಿಮ್ಮಿಗಳು ಸರಾಗವಾಗಿ ಹಾದುಹೋಗುವಂತೆ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಸದಸ್ಯೆ ಶಶಿಪ್ರಭಾ ಶೆಟ್ಟಿ ಹೇಳಿದರೆ, ಗೀತಾ ವಾಗ್ಲೆ ಮಾತನಾಡಿ, ಬಂಟಕಲ್ಲು ರಸ್ತೆ ಬದಿ ಚರಂಡಿ ಕಾಮಗಾರಿ ಅಪೂರ್ಣವಾಗಿದ್ದು, ಮೇಲ್ಭಾಗದಲ್ಲಿ ಕಾಂಕ್ರಿಟ್ ಮುಚ್ಚಳ ಹಾಕಿಲ್ಲ. ಕಾಮಗಾರಿಗಾಗಿ ರಸ್ತೆ ಬದಿ ಮರ ತೆರವು ಮಾಡಿದ್ದು, ಮೀನುಗಾರ ಮಹಿಳೆ ಯರು ಬಿಸಿಲಲ್ಲಿ ನಿಂತು ಮೀನು ಮಾರಾಟ ಮಾಡುತ್ತಿದ್ದಾರೆ. ಅವರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡಿ ಎಂದು ಲೋಕೋಪಯೋಗಿ ಇಲಾಖೆಗೆ ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಇಒ ಮೋಹನ್ ರಾಜ್, ಮೀನುಗಾರಿಕಾ ನಿಗಮಕ್ಕೆ ಗ್ರಾಪಂನಿಂದ ಪತ್ರ ಬರೆದರೆ ಅವರು ಸೂಕ್ತ ಸ್ಥಳದಲ್ಲಿ ವ್ಯವಸ್ಥಿತ ಮಾರುಕಟ್ಟೆ ಮಾಡಿಕೊಡುತ್ತಾರೆ ಎಂದರು.

ಆರೋಗ್ಯ ಕರ್ನಾಟಕ ಯೋಜನೆ ಮಾಹಿತಿ
ಸಭೆಯಲ್ಲಿ ಆರೋಗ್ಯ ಕರ್ನಾಟಕ ಯೋಜನೆ ಜಿಲ್ಲಾ ಸಂಯೋಜಕ ಡಾ. ಸಚ್ಚಿದಾನಂದ ಅವರು ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ವಾಜಪೇಯಿ ಆರೋಗ್ಯಶ್ರೀ, ರಾಜೀವ್‌ಗಾಂಧಿ ಆರೋಗ್ಯಶ್ರೀ, ಯಶಸ್ವಿನಿ ಮೊದಲಾದ ಎಲ್ಲಾ ಯೋಜನೆಗಳನ್ನು ಒಟ್ಟು ಸೇರಿಸಿ ‘ಆರೋಗ್ಯ ಕರ್ನಾಟಕ ಯೋಜನೆ’ ಜಾರಿ ಮಾಡಲಾಗಿದೆ. ಬಿಪಿಎಲ್ ಕಾರ್ಡ್‌ದಾರರಿಗೆ ಸಂಪೂರ್ಣ ಉಚಿತ ಹಾಗೂ ಎಪಿಎಲ್ ಕಾರ್ಡ್‌ದಾರರಿಗೆ ಶೇ.30ರಷ್ಟು ರಿಯಾಯಿತಿ ದೊರೆಯಲಿದೆ ಎಂದರು.
ಪ್ರಥಮ ಹಂತ ಮತ್ತು ದ್ವಿತೀಯ ಹಂತದ ಚಿಕಿತ್ಸೆಗೆ ಸರಕಾರಿ ಆಸ್ಪತ್ರೆಗೆ ದಾಖಲಾತಿ ಪಡೆದು, ಅಲ್ಲಿ ವೈದ್ಯರ ಶಿಫಾರಸ್ಸಿನ ಮೇರೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಬಹುದು. ತುರ್ತು ಸಂದರ್ಭಗಳಿಗೆ ಯಾವುದೇ ಶಿಫಾರಸ್ಸಿನ ಅಗತ್ಯವಿರುವುದಿಲ್ಲ. ಉಡುಪಿಯಲ್ಲಿ ಆದರ್ಶ ಮತ್ತು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಈ ಸೌಲಭ್ಯ ಪ್ರಾರಂಭಿಸಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News