ಮೂಡುಬಿದಿರೆ ಎಂಸಿಎಸ್‍ಬ್ಯಾಂಕಿನಿಂದ ಕಲ್ಪವೃಕ್ಷ ಆರೋಗ್ಯಕಾರ್ಡ್

Update: 2018-09-12 14:20 GMT

ಮೂಡುಬಿದಿರೆ, ಸೆ. 12: ಕರ್ನಾಟಕ ಸರ್ಕಾರದಿಂದ ಈ ಹಿಂದೆ ಚಾಲ್ತಿಯಲ್ಲಿದ್ದ ಯಶಸ್ವಿನಿ ಆರೋಗ್ಯ ಯೋಜನೆ ಮಾದರಿಯಲ್ಲಿ ಈಗಾಗಲೇ ಸಹಕಾರಿ ರಂಗದಲ್ಲಿ ಶತಮಾನೋತ್ಸವ ಕಂಡಿರುವ ಮೂಡುಬಿದಿರೆಯ ಎಂಸಿಎಸ್ ಬ್ಯಾಂಕ್ ಕಲ್ಪವೃಕ್ಷ ಆರೋಗ್ಯ ಕಾರ್ಡ್ ಸೌಲಭ್ಯವನ್ನು  ಬ್ಯಾಂಕಿನ ಸದಸ್ಯರಿಗಾಗಿ ಜಾರಿಗೆ ತಂದಿದೆ. ಯಾವುದೇ ಆಸ್ಪತ್ರೆಗಳ ಜತೆಗೆ ಲಿಂಕ್ ಆಗಿರದ ಈ ವಿಶಿಷ್ಠ ಆರೋಗ್ಯ ಯೋಜನೆ ರಾಜ್ಯದಲ್ಲೇ ಮೊದಲ ಪ್ರಯೋಗ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಬ್ಯಾಂಕಿನ ಎ ಕ್ಲಾಸ್ ಸದಸ್ಯರು ಈ ಯೋಜನೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡಬಹುದಾದ ಎಲ್ಲ ರೀತಿಯ ಕಾಯಿಲೆಗಳಿಗೆ ಒಂದು ವರ್ಷಕ್ಕೆ ಗರಿಷ್ಠ 2 ಲಕ್ಷ ರೂ ಆರ್ಥಿಕ ನೆರವು ಪಡೆಯಲಿದ್ದಾರೆ. ಪ್ರಾಂತ್ಯ ಮಾರ್ಪಾಡಿ ಗ್ರಾಮ ವ್ಯಾಪ್ತಿಯ ಸದಸ್ಯರಿಗೆ ಸೀಮಿತವಾಗಿರುವ ಈ ಯೋಜನೆಯಲ್ಲಿ ಸದಸ್ಯರು ತಮಗೆ ಬೇಕಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.

ಸದಸ್ಯರು ನಿಗದಿತ ನಮೂನೆಯಲ್ಲಿ ಅರ್ಜಿಸಲ್ಲಿಸಿ ಆರಂಭದಲ್ಲಿ ಮಾತ್ರ ರೂ 1000 ನೋಂದಣಿ ಶುಲ್ಕದೊಂದಿಗೆ ಈ ಸೌಲಭ್ಯಕ್ಕೆ ಸೇರಲು ಅವಕಾಶವಿದ್ದು ಬಳಿಕ ಯಾವುದೇ ವಾರ್ಷಿಕ ಶುಲ್ಕಗಳಿರುವುದಿಲ್ಲ ಎಂದು ಬ್ಯಾಂಕಿನ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News