'ವಿದ್ಯಾರ್ಥಿಗಳನ್ನು ಸಮಾಜಮುಖಿಯನ್ನಾಗಿ ಮಾಡುವ ಶಕ್ತಿ ಶಿಕ್ಷಕನಲ್ಲಿದೆ'

Update: 2018-09-12 14:25 GMT

ಭಟ್ಕಳ, ಸೆ. 12: "ವಿದ್ಯಾರ್ಥಿಗಳಲ್ಲಿರುವ ನಕಾರಾತ್ಮಕ ಮನೋಭಾವವನ್ನು ಹೋಗಲಾಡಿಸಿ ಅವರನ್ನು ಉತ್ತಮ ನಾಗರೀಕರನ್ನಾಗಿ ಮಾಡುವ ಕೆಲಸವನ್ನು ಶಿಕ್ಷಕರು ಮಾಡುತ್ತಾರೆ" ವಿದ್ಯಾರ್ಥಿಗಳನ್ನು ಸಮಾಜಮುಖಿಯನ್ನಾಗಿ ಮಾಡುವ ಶಕ್ತಿ ಶಿಕ್ಷಕನಲ್ಲಿದೆ, ಎಂದು ಗುರು ಸುಧೀಂದ್ರ ಬಿ.ಸಿ.ಎ. ಕಾಲೇಜಿನ ಪ್ರಾಂಶುಪಾಲರಾದ ಶ್ರೀನಾಥ್ ಪೈ ಹೇಳಿದರು.

ನಗರದ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನಲ್ಲಿ ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, "ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ತಮಗೆ ದೊರೆಯುವ ಉತ್ತಮ ಅವಕಾಶವನ್ನು ಬಳಸಿಕೊಂಡು ಯಶಸ್ವಿಯಾಗಬೇಕು" ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಗುರು ಪದವಿ ಕಾಲೇಜಿನ ಪ್ರಾಂಶುಪಾಲರಾದ  ನಾಗೇಶ್ ಎಮ್. ಭಟ್ ಮಾತನಾಡಿ, "ಪ್ರತಿಯೊಬ್ಬ ಶಿಕ್ಷಕನಿಗೆ ವಿದ್ಯಾರ್ಥಿಗಳಿಂದ ಸಮಾಜದಲ್ಲಿ ಪರಿಗಣನೆ ಸಿಗುತ್ತದೆ, ವಿದ್ಯಾರ್ಥಿಗಳು ಇಲ್ಲದೆ ಶಿಕ್ಷಕರಿಗೆ ಅಸ್ಥಿತ್ವವೇ ಇಲ್ಲ, ವಿದ್ಯಾರ್ಥಿಗಳ ಶ್ರೇಯೋಭಿವೃಧ್ಧಿಗೆ ಶಿಕ್ಷಕರು ತಮ್ಮ ಜೀವನವನ್ನೆ ಅರ್ಪಿಸುತ್ತಾರೆ" ಎಂದರು. 

ಕಾಲೇಜಿನ ಬಿ. ಎ. ಮತ್ತು ಬಿ.ಕಾಂ ವಿಭಾಗದ ಸಂಯೋಜಕ ಫಣಿಯಪ್ಪಯ್ಯ ಹೆಬ್ಬಾರ ಕಾರ್ಯಕ್ರಮದ ಕಿರುಪರಿಚಯ ನೀಡಿದರು. 

ತ್ರತೀಯ ಬಿ.ಕಾಂ. ವಿದ್ಯಾರ್ಥಿಗಳಾದ ರಶ್ಮಿ ಪುರಾಣಿಕ್ ಸ್ವಾಗತಿಸಿದರು, ಎಮ್. ಎಸ್. ಮಾನಸ ಮತ್ತು ರಾಮಕೃಷ್ಣ ಹೆಬ್ಬಾರ ನಿರೂಪಿಸಿದರು ಹಾಗೂ ಅಕ್ಷತಾ ಪ್ರಭು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News