ಮೋಟಾರ್‌ಸೈಕ್ಲಿಂಗ್ ಪಾಡ್‌ಕಾಸ್ಟ್: ಇಬ್ಬರು ಭಾರತೀಯರಿಗೆ ಪ್ರಶಸ್ತಿ

Update: 2018-09-12 16:23 GMT

ಲಂಡನ್, ಸೆ. 12: ಮೋಟರ್‌ಸೈಕ್ಲಿಂಗ್ ಮತ್ತು ಅದರ ಇತಿಹಾಸವನ್ನು ದಾಖಲಿಸುವ ಭಾರತದ ಪ್ರಥಮ ‘ಪಾಡ್‌ಕಾಸ್ಟ್’ (ಇಂಟರ್‌ನೆಟ್ ಮೂಲಕ ಪಡೆಯಬಹುದಾದ ಡಿಜಿಟಲ್ ಶ್ರಾವ್ಯ ತುಣುಕು)ನ ಹಿಂದಿರುವ ಇಬ್ಬರಿಗೆ ಬ್ರಿಟನ್‌ನ ಪ್ರತಿಷ್ಠಿತ 3,000 ಪೌಂಡ್ (ಸುಮಾರು 2.81 ಲಕ್ಷ ರೂಪಾಯಿ) ಪ್ರಶಸ್ತಿಯನ್ನು ನೀಡಲಾಗಿದೆ.

ಶೀರ್ಶೇಂದು ಬ್ಯಾನರ್ಜಿ ಮತ್ತು ಅರ್ವಿಂದರ್ ಸಿಂಗ್ (ಅವರು ಶ್ಯಾಂಡಿ ಮತ್ತು ಸನ್ನಿ ಎಂದು ಪರಿಚಿತರು) ಲಂಡನ್‌ನಲ್ಲಿ ಕಳೆದ ಶನಿವಾರ ‘ವಿಕರ್ಸ್ ರೇಡಿಯೊ ಆ್ಯಂಡ್ ಆಡಿಯೊ ಫಂಡಿಂಗ್’ ರನ್ನರ್ಸ್‌ ಅಪ್ ಪ್ರಶಸ್ತಿ ಸ್ವೀಕರಿಸಿದರು.

ಅವರ ‘ಬೈಕರ್ ರೇಡಿಯೊ ರಾಡ್‌ಕಾಸ್ಟ್’ ಸರಣಿಯಲ್ಲಿ ಜಗತ್ತಿನ ಅತ್ಯಂತ ಕಠಿಣ ಮೋಟರ್‌ಸೈಕಲ್ ರ್ಯಾಲಿಗಳ ಪೈಕಿ ಒಂದಾಗಿರುವ ‘ರೇಡ್ ಡಿ ಹಿಮಾಲಯ’ದಲ್ಲಿ ಭಾಗವಹಿಸುತ್ತಿರುವ ಹಲವಾರು ಶ್ರೇಷ್ಠ ಬೈಕ್ ಸವಾರರನ್ನು ಚಿತ್ರಿಸಲಾಗಿದೆ.

‘‘ಭವಿಷ್ಯ ಉತ್ತಮವಾಗಿರುತ್ತದೆ ಎಂದು ನಾವು ಯಾವತ್ತೂ ನಂಬಿದವರು. ವಿಕರ್ಸ್ ಪ್ರಶಸ್ತಿಯನ್ನು ಗೆದ್ದಿರುವುದು ನೈಜ ಶ್ಲಾಘನೆಯಾಗಿದೆ’’ ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News