ಭಾರತೀಯ ಅಮೆರಿಕನ್ ಕ್ಯಾನ್ಸರ್ ಸಂಶೋಧಕನಿಗೆ ಪ್ರತಿಷ್ಠಿತ ಪ್ರಶಸ್ತಿ

Update: 2018-09-12 16:45 GMT

ವಾಶಿಂಗ್ಟನ್, ಸೆ. 12: ಅಮೆರಿಕ ರಾಷ್ಟ್ರೀಯ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನ ‘ಶ್ರೇಷ್ಠ ಸಂಶೋಧಕ ಪ್ರಶಸ್ತಿ’ಯನ್ನು ಮಿಶಿಗನ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಅರುಲ್ ಚಿನ್ನಯ್ಯನ್‌ಗೆ ನೀಡಿದೆ.

ಜೊತೆಗೆ ಕ್ಯಾನ್ಸರ್ ಕಣಗಳನ್ನು ಗುರುತಿಸುವ ಸಂಶೋಧನೆಗಾಗಿ 7 ವರ್ಷಗಳ ಅವಧಿಗೆ 6.5 ಮಿಲಿಯ ಡಾಲರ್ (ಸುಮಾರು 47 ಕೋಟಿ ರೂಪಾಯಿ) ನಿಧಿಯನ್ನು ಒದಗಿಸಿದೆ. ಅವರ ಈ ಸಂಶೋಧನೆಯು ಕ್ಯಾನ್ಸರ್ ಪತ್ತೆಗೆ ಮತ್ತು ನೂತನ ಚಿಕಿತ್ಸೆಗಳನ್ನು ರೂಪಿಸಲು ನೆರವಾಗಲಿದೆ.

‘‘ಕ್ಯಾನ್ಸರ್ ರೋಗಿಗಳಿಗೆ ಪರಿಷ್ಕೃತ ರೋಗಪತ್ತೆ ವಿಧಾನಗಳು ಹಾಗೂ ಉತ್ತಮ ಚಿಕಿತ್ಸೆಗಳನ್ನು ನೀಡುವ ಗುರಿಯೊಂದಿಗೆ ಕ್ಯಾನ್ಸರ್ ಚಿಕಿತ್ಸಾ ಕ್ಷೇತ್ರವು ಬೆಳೆಯುತ್ತಾ ಸಾಗುತ್ತದೆ’’ ಎಂದು ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಅರುಲ್ ಹೇಳಿದ್ದಾರೆ.

‘ಪ್ರಿಸಿಶನ್ ಓಂಕಾಲಜಿ’ ಪರಿಣತರಾಗಿರುವ ಅರುಲ್ 2010ರಲ್ಲಿ ಮಿಶಿಗನ್ ಓಂಕಾಲಜಿ ಸೀಕ್ವೆನ್ಸಿಂಗ್ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News