ಜಪಾನ್ ಓಪನ್ : ಪಿ.ವಿ.ಸಿಂಧುಗೆ ಸೋಲು

Update: 2018-09-13 08:47 GMT

ಟೋಕಿಯೋ, ಸೆ.13: ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ನ ಮಹಿಳೆಯರ ಸಿಂಗಲ್ಸ್ ನ ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಗುರುವಾರ ಭಾರತದ ಪಿ.ವಿ.ಸಿಂಧು ಸೋತು ನಿರ್ಗಮಿಸಿದ್ದಾರೆ.

ಸಿಂಧು ಅವರು  19ರ ಹರೆಯದ  ವಿಶ್ವದ ನ.14 ಆಟಗಾರ್ತಿ  ಚೀನಾದ ಫಿಂಗ್ ಜೀ ಗಾವೊ ವಿರುದ್ಧ 18-21, 19-21 ಅಂತರದಲ್ಲಿ ಸೋಲು ಅನುಭವಿಸಿದರು..

ಇದೇ ವೇಳೆ ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಕೆ.ಶ್ರೀಕಾಂತ್ ಅವರು ಹಾಂಕಾಂಗ್ ನ ವಾಂಗ್ ವಿಂಗ್ ಕಿ ವಿರುದ್ಧ 21-15, 21-14 ಅಂತರದಲ್ಲಿ ಜಯ ಗಳಿಸಿದರು. ಇನ್ನೊಂದು ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಎಚ್ ಎಸ್ ಪ್ರಣಯ್ ಅವರು ಇಂಡೋನೇಷ್ಯಾದ ಅಂಥೋಣಿ ಸಿನಿಸುಕಾ ವಿರುದ್ಧ 14-21, 17-21 ಅಂತರದಲ್ಲಿ ಸೋತು ಹೊರನಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News