ಸೀರೆ ಉಟ್ಟು, ಬಿಂದಿ ಧರಿಸಿದ ಗೌತಮ್ ಗಂಭೀರ್ !: ಕಾರಣವೇನು ಗೊತ್ತಾ?

Update: 2018-09-13 15:30 GMT

ಹೊಸದಿಲ್ಲಿ, ಸೆ.13: ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಇತ್ತೀಚೆಗೆ ಇಲ್ಲಿ ನಡೆದ ಏಳನೇ ವರ್ಷದ ತೃತೀಯ ಲಿಂಗಿಗಳ ಹಬ್ಬದಲ್ಲಿ ಭಾಗವಹಿಸಿದ್ದರು. ಅದರಲ್ಲೇನು ವಿಶೇಷ ಎಂದು ಹುಬ್ಬೇರಿಸಬೇಡಿ. ಸೀರೆ ಉಟ್ಟು, ಹಣೆಗೆ ಬಿಂದಿ ಉಟ್ಟುಕೊಂಡು ತೃತೀಯ ಲಿಂಗಿಗಳನ್ನು ಬೆಂಬಲಿಸಿದ್ದು ವಿಶೇಷ.

ಸಲಿಂಗಕಾಮವನ್ನು ಅಪರಾಧವಲ್ಲ ಎಂದು ಪರಿಗಣಿಸಿ ಭಾರತೀಯ ದಂಡಸಂಹಿತೆಯ ಸೆಕ್ಷನ್ 377ರ ಬಗ್ಗೆ ಇತ್ತೀಚೆಗೆ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇಲ್ಲಿನ ಮಾಲ್ ಒಂದರಲ್ಲಿ ನಡೆದ ಈ ತೃತೀಯಲಿಂಗಿಗಳ ಹಬ್ಬದಲ್ಲಿ ನೂರಾರು ಮಂದಿ ಪಾಲ್ಗೊಂಡು ಸಂಭ್ರಮಿಸಿದರು. ಎಚ್‍ಐವಿ/ಏಡ್ಸ್ ಅಲೈನ್ಸ್ ಇಂಡಿಯಾ ಇದನ್ನು ಆಯೋಜಿಸಿತ್ತು. ಈ ವರ್ಷದ ಧ್ಯೇಯವಾಕ್ಯ "ಬಾರ್ನ್ ದಿಸ್ ವೇ" ಎಂದಾಗಿತ್ತು.

ತೃತೀಯಲಿಂಗಿಗಳು ಒಂದೆಡೆ ಸೇರಿ, ಸಮುದಾಯದ ಸಬಲೀಕರಣ ಬಗ್ಗೆ ಚರ್ಚಿಸಿದರು. ಜತೆಗೆ ತಮ್ಮಲ್ಲಿರುವ ಪ್ರತಿಭೆಯನ್ನು ಬಳಸಿಕೊಂಡು ಆಯಾ ಕ್ಷೇತ್ರದಲ್ಲಿ ದೇಶಕ್ಕಾಗಿ ಕೊಡುಗೆ ನೀಡುವಂತೆ ಅರಿವು ಮೂಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಂಭೀರ್ ಸೀರೆ ಧರಿಸಿ ಗಮನಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News