ಪಕ್ಕಲಡ್ಕ: ಕಾಮಗಾರಿ ತ್ವರಿತಗೊಳಿಸಿ ರಸ್ತೆ ನಿರ್ಮಾಣ ಪೂರ್ಣಗೊಳಿಸಲು ಡಿವೈಎಫ್ಐ ಒತ್ತಾಯ

Update: 2018-09-14 06:17 GMT

ಮಂಗಳೂರು, ಸೆ. 14: ಪಡೀಲ್ ಬಜಾಲ್ ಮುಖ್ಯರಸ್ತೆಯಲ್ಲಿ ಜೆ.ಎಮ್ ರೋಡ್ ನಿಂದ ಪಕ್ಕಲಡ್ಕದ ವರೆಗಿನ ಅರ್ಧ ಕಿಲೋ ಮೀಟರ್ ಅಂತರದ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸಲು ಎರಡು ತಿಂಗಳಿಗಿಂತಲೂ ಅಧಿಕ ಸಮಯ ಪಡೆದು ಜನ ಸಾಮಾನ್ಯರ ಓಡಾಟಕ್ಕೆ ಅಡ್ಡಿಯುಂಟು ಮಾಡಿರುವುದನ್ನು ಡಿವೈಎಫ್ಐ ಪಕ್ಕಲಡ್ಕ ಘಟಕ ಖಂಡಿಸುತ್ತದೆ ಹಾಗೂ ನಿಧಾನಗತಿಯ ಕಾಮಗಾರಿಯನ್ನು ವಿರೋಧಿಸುತ್ತದೆ ಎಂದು ತಿಳಿಸಿದೆ.

ಜೆ.ಎಮ್ ರೋಡ್ ನಿಂದ ಪಕ್ಕಲಡ್ಕದ ವರೆಗಿನ ರಸ್ತೆಯು ಅಗಲೀಕರಣ ಪ್ರಕ್ರಿಯೆ ನಡೆದು ಒಂದು ವರುಷ ಕಳೆದಿದೆ. ಈ  ರಸ್ತೆಯಲ್ಲಿ ಒಂದು ಭಾಗ ಕಂಕನಾಡಿ ವಾರ್ಡ್ ಗೆ ಇನ್ನೊಂದು ಭಾಗ ಅಳಪೆ ದಕ್ಷಿಣ ವಾರ್ಡ್ ವ್ಯಾಪ್ತಿಗೆ ಒಳಪಟ್ಟಿದೆ. ಈ ರಸ್ತೆಯನ್ನು ನಿರ್ಮಿಸಲು ಎರಡು ಪ್ರತ್ಯೇಕ ಕಾಂಟ್ರೆಕ್ಟ್ ದಾರರಿಗೆ ವಹಿಸಲಾಗಿದ್ದರೂ ಕಾಮಗಾರಿ ಕೆಲಸ ಮಾತ್ರ ನಿಧಾನಗತಿಯಲ್ಲಿ ಸಾಗುತ್ತಿದೆ. ಈ ರಸ್ತೆಗೆ ಕಾಂಕ್ರಿಟೀಕರಣಗೊಳಿಸಲು ಕಳೆದ ಎರಡುವರೆ ತಿಂಗಳುಗಳಿಂದ ಈ ಮಾರ್ಗವಾಗಿ ವಾಹನ ಓಡಾಟವನ್ನು ಕೂಡಾ ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಆದರೆ  ಕೆಲಸ ಮಾತ್ರ ಆಮೆವೇಗದಲ್ಲಿ ಸಾಗುತ್ತಿದೆ. ಇದರಿಂದಾಗಿ ಜನ ಪರದಾಡುವಂತಾಗಿದೆ. ಜನ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ತೆರಳಲು ಬಸ್ ಹಿಡಿಯಬೇಕಾದರೆ ಸುಮಾರು ದೂರ ನಡೆಯ ಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಡಿವೈಎಫ್ಐ ಜೆಮ್ ರೋಡ್ ನಿಂದ ಪಕ್ಕಲಡ್ಕದ ವರೆಗಿನ ರಸ್ತೆ ನಿರ್ಮಾಣದ ನಿಧಾನಗತಿಯ ಕಾಮಗಾರಿಯನ್ನು ವಿರೋಧಿಸುತ್ತದೆ ಹಾಗೂ ತ್ವರಿತಗತಿಯಲ್ಲಿ ರಸ್ತೆಯನ್ನು ನಿರ್ಮಿಸಿ ಜನರ ಓಡಾಟಕ್ಕೆ ಮುಕ್ತವನ್ನಾಗಿಸಬೇಕೆಂದು ಒತ್ತಾಯಿಸುತ್ತದೆ ಎಂದು ಡಿವೈಎಫ್ಐ ಪಕ್ಕಲಡ್ಕ ಘಟಕದ ಅಧ್ಯಕ್ಷ  ರಿತೇಶ್ ಹಾಗೂ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ತಿಳಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News