ಮತ್ತೊಂದು ಹೆಣ್ಣುಮಗು ಜನಿಸಿತೆಂಬ ಕೋಪ: 18 ತಿಂಗಳ ಮಗುವನ್ನು ಟೆರೇಸ್‌ನಿಂದ ಕೆಳಗೆಸೆದ ವ್ಯಕ್ತಿ

Update: 2018-09-14 13:27 GMT

ಬರೇಲಿ, ಸೆ.14: ಪತ್ನಿಗೆ ಮತ್ತೊಂದು ಹೆಣ್ಣು ಮಗುವಾಯಿತೆಂಬ ಕೋಪದಲ್ಲಿ ವ್ಯಕ್ತಿಯೊಬ್ಬ ತನ್ನ 18 ತಿಂಗಳ ಹೆಣ್ಣುಮಗುವನ್ನು ಮನೆಯ ಟೆರೇಸ್‌ನಿಂದ ಕೆಳಗೆಸೆದು ಹತ್ಯೆಗೈಯಲು ಯತ್ನಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

  ಘಟನೆಯಲ್ಲಿ ಮಗು ಕಾವ್ಯಾಳಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಸಿ.ಬಿ.ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಪರ್ಧೌಲಿ ಎಂಬ ಗ್ರಾಮದಲ್ಲಿ ಘಟನೆ ನಡೆದಿದೆ. ಅರವಿಂದ್ ಗಂಗ್ವಾರ್ ಎಂಬ ವ್ಯಕ್ತಿ ಸಾರಾಯಿ ನಶೆಯಲ್ಲಿ ಈ ಕೃತ್ಯ ಎಸಗಿದ್ದಾನೆ. ಈತನಿಗೆ ಒಂದೂವರೆ ವರ್ಷದ ಹೆಣ್ಣುಮಗು ಇದೆ. ಐದು ದಿನ ಹಿಂದೆ ಆತನ ಪತ್ನಿ ಮತ್ತೊಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ಮನೆಯಲ್ಲಿ ನಿರಾಶೆಯ ವಾತಾವರಣವಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

    ಗುರುವಾರ ಅರವಿಂದ ತನ್ನ ಮೊದಲ ಮಗಳನ್ನು ಮನೆಯ ಟೆರೇಸ್‌ಗೆ ಕರೆದೊಯ್ದು ಅಲ್ಲಿಂದ ಕೆಳಗೆ ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ. ಅರವಿಂದ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News