'ನಾಚಿಕೆ ಬಿಟ್ಟ ದೇಶಗಳ ಪಟ್ಟಿ'ಯಲ್ಲಿ ಭಾರತ !

Update: 2018-09-14 13:49 GMT

ಜಿನೇವ, ಸೆ. 14: ವಿಶ್ವಸಂಸ್ಥೆಯು ಭಾರತ, ಚೀನಾ, ರಶ್ಯ ಸೇರಿದಂತೆ 38 ‘ನಾಚಿಕೆ ಬಿಟ್ಟ’ ದೇಶಗಳ ಪಟ್ಟಿಯೊಂದನ್ನು ತಯಾರಿಸಿದೆ. ಈ ದೇಶಗಳು, ಮಾನವಹಕ್ಕುಗಳ ವಿಷಯದಲ್ಲಿ ತನ್ನೊಂದಿಗೆ ಸಹಕರಿಸಿದ ಪ್ರಜೆಗಳನ್ನು ಕೊಲ್ಲುವುದು, ಅವರಿಗೆ ಹಿಂಸೆ ನೀಡುವುದು ಹಾಗೂ ಸ್ವೇಚ್ಛಾಚಾರದ ಬಂಧನ ನಡೆಸುವುದು ಸೇರಿದಂತೆ ಅವರ ವಿರುದ್ಧ ಪ್ರತೀಕಾರದ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ ಎಂದು ಅದು ಆರೋಪಿಸಿದೆ.

ಸಂತ್ರಸ್ತರು ಮತ್ತು ಮಾನವಹಕ್ಕುಗಳ ಹೋರಾಟಗಾರರ ವಿರುದ್ಧ ಸಾರ್ವಜನಿಕವಾಗಿ ಅಪಪ್ರಚಾರ ನಡೆಸುವುದು, ಅವರನ್ನು ಅಪರಾಧಿಗಳೆಂಬಂತೆ ಬಿಂಬಿಸುವುದು, ಅವರ ಮೇಲೆ ನಿಗಾ ಇಡುವುದು ಮತ್ತು ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದು ಸೇರಿದಂತೆ ಹಲವಾರು ಪ್ರತೀಕಾರದ ಕ್ರಮಗಳನ್ನು ಈ ದೇಶಗಳು ತೆಗೆದುಕೊಳ್ಳುತ್ತಿವೆ ಎಂಬುದಾಗಿ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟರಸ್ ಬಿಡುಗಡೆ ಮಾಡಿದ ವಾರ್ಷಿಕ ವರದಿ ಆರೋಪಿಸಿದೆ.

‘‘ವಿಶ್ವಸಂಸ್ಥೆಯೊಂದಿಗೆ ಸಹಕರಿಸಿರುವುದಕ್ಕಾಗಿ ಜನರನ್ನು ಶಿಕ್ಷಿಸುವುದು ನಾಚಿಕೆಯ ವಿಷಯವಾಗಿದೆ. ಇದನ್ನು ನಿಲ್ಲಿಸಲು ಪ್ರತಿಯೊಬ್ಬರು ಹೋರಾಡಬೇಕು’’ ಎಂದು ವರದಿಯಲ್ಲಿ ಗುಟರಸ್ ಬರೆದಿದ್ದಾರೆ.

 ‘ನಾಚಿಕೆ ಬಿಟ್ಟ’ ದೇಶಗಳು

ಪಟ್ಟಿಯಲ್ಲಿರುವ ದೇಶಗಳು: ಬಹರೈನ್, ಕ್ಯಾಮರೂನ್, ಚೀನಾ, ಕೊಲಂಬಿಯ, ಕ್ಯೂಬಾ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ, ಡಿಜಿಬೌಟಿ, ಈಜಿಪ್ಟ್, ಗ್ವಾಟೆಮಾಲ, ಗಯಾನ ಹೊಂಡುರಸ್ ಹಂಗೇರಿ, ಭಾರತ, ಇಸ್ರೇಲ್, ಕಿರ್ಗಿಸ್ತಾನ್, ಮಾಲ್ದೀವ್ಸ್, ಮಾಲಿ, ಮೊರೊಕ್ಕೊ ಮ್ಯಾನ್ಮಾರ್, ಫಿಲಿಪ್ಪೀನ್ಸ್, ರಶ್ಯನ್ ಫೆಡರೇಶನ್, ರುವಾಂಡ, ಸೌದಿ ಅರೇಬಿಯ, ದಕ್ಷಿಣ ಸುಡಾನ್, ಥಾಯ್ಲೆಂಡ್, ಟ್ರಿನಿಡಾಡ್ ಮತ್ತು ಟೊಬಾಗೊ, ಟರ್ಕಿ, ತುರ್ಕ್‌ಮೆನಿಸ್ತಾನ್ ಮತ್ತು ವೆನೆಝುವೆಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News