1.88 ಲಕ್ಷ ಮನೆ, ಉದ್ಯಮಗಳಿಗೆ ವಿದ್ಯುತ್ ಸ್ಥಗಿತ

Update: 2018-09-14 13:46 GMT

ವಾಶಿಂಗ್ಟನ್, ಸೆ. 14: ಚಂಡಮಾರುತ ‘ಫ್ಲಾರೆನ್ಸ್’ ಅಮೆರಿಕದ ಪೂರ್ವ ತೀರಕ್ಕೆ ಅಪ್ಪಳಿಸುವುದಕ್ಕೆ ಪೂರ್ವಭಾವಿಯಾಗಿ ಈ ವಲಯದಲ್ಲಿ ಭಾರೀ ಮಳೆಯಾಗಿದ್ದು, ನಾರ್ತ್ ಕ್ಯಾರಲೈನ್ ಮತ್ತು ಸೌತ್ ಕ್ಯಾರಲೈನ್ ರಾಜ್ಯಗಳ 1.88 ಲಕ್ಷಕ್ಕೂ ಅಧಿಕ ಮನೆಗಳು ಮತ್ತು ವ್ಯಾಪಾರ ಮಳಿಗೆಗಳ ವಿದ್ಯುತ್ ಸರಬರಾಜು ಶುಕ್ರವಾರ ಬೆಳಗ್ಗೆ ವೇಳೆಗೆ ನಿಂತುಹೋಗಿದೆ.

ಗುರುವಾರ ಸಂಜೆಯ ವೇಳೆಗೆ ಚಂಡಮಾರುತದ ಕೇಂದ್ರ ಬಿಂದು ನಾರ್ತ್ ಕ್ಯಾರಲೈನದ ಮೋರ್‌ಹೆಡ್ ನಗರದ ನೈರುತ್ಯಕ್ಕೆ 80 ಕಿ.ಮೀ. ದೂರದಲ್ಲಿ ಪತ್ತೆಯಾಗಿತ್ತು. ಈ ಹಂತದಲ್ಲಿ ಚಂಡಮಾರುತದ ತೀವ್ರತೆಯನ್ನು ‘ಕೆಟಗರಿ 1’ಕ್ಕೆ ಇಳಿಸಲಾಗಿದೆ. ‘ಕೆಟಗರಿ 1’ರ ಚಂಡಮಾರುತದಲ್ಲಿ ಗಂಟೆಗೆ ಗರಿಷ್ಠ 150 ಕಿ.ಮೀ. ವೇಗದಲ್ಲಿ ಗಾಳಿ ಬೀಸಬಹುದಾಗಿದೆ.

‘ಫ್ಲಾರೆನ್ಸ್’ ಚಂಡಮಾರುತದ ಪ್ರಭಾವದಿಂದಾಗಿ ಭಾರೀ ಮಳೆ ಸುರಿಯುತ್ತಿದೆ, ಜೋರು ಗಾಳಿ ಬೀಸುತ್ತಿದೆ ಹಾಗೂ ಮಳೆಯಿಂದಾಗಿ ಪ್ರವಾಹ ಏರುತ್ತಿದೆ. ಹಾಗಾಗಿ, ಚಂಡಮಾರುತದ ಮಾರ್ಗದಲ್ಲಿ ಬರುವ ಲಕ್ಷಾಂತರ ನಿವಾಸಿಗಳು ಬೆದರಿಕೆ ಎದುರಿಸುತ್ತಿದ್ದಾರೆ.

ಒಮ್ಮೆ ಚಂಡಮಾರುತ ಅಪ್ಪಳಿಸಿದ ಬಳಿಕ 30 ಲಕ್ಷವರೆಗಿನ ಮನೆಗಳು ಮತ್ತು ವ್ಯಾಪಾರ ಮಳಿಗೆಗಳ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಬಹುದು ಎಂದು ಊಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News