ಮುಂದುವರಿದ ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ

Update: 2018-09-14 14:03 GMT

ಹೊಸದಿಲ್ಲಿ, ಸೆ.14: ರೂಪಾಯಿ ಮೌಲ್ಯ ಕುಸಿತ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳದ ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಹೆಚ್ಚಾಗಿದ್ದು ಶುಕ್ರವಾರ ದಾಖಲೆ ಮಟ್ಟಕ್ಕೆ ತಲುಪಿದೆ.

ಶುಕ್ರವಾರ ಪೆಟ್ರೋಲ್ ಬೆಲೆ ಲೀಟರ್‌ಗೆ 28 ಪೈಸೆ, ಡೀಸೆಲ್ ಬೆಲೆ ಲೀಟರ್‌ಗೆ 22 ಪೈಸೆ ಹೆಚ್ಚಿದೆ ಎಂದು ತೈಲ ಮಾರಾಟ ಸಂಸ್ಥೆಗಳು ಪ್ರಕಟಣೆಯಲ್ಲಿ ತಿಳಿಸಿವೆ. ಮುಂಬೈಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 88.67 ರೂ, ಡೀಸೆಲ್ ಬೆಲೆ ಲೀಟರ್‌ಗೆ 77.82 ರೂ, ಚೆನ್ನೈಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 84.49 ರೂ, ಡೀಸೆಲ್ ಲೀಟರ್‌ಗೆ 77.49 ರೂ, ಕೋಲ್ಕತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 83.14 ರೂ, ಡೀಸೆಲ್‌ಗೆ 75.36 ರೂ.ಗೆ ತಲುಪಿದೆ.

  ದಿಲ್ಲಿಯಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಶನ್(ಐಒಸಿ) ನ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 81.28 ರೂ. ಆಗಿದ್ದರೆ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್(ಎಚ್‌ಪಿಸಿಎಲ್)ನ ಪೆಟ್ರೋಲ್ ಬಂಕ್‌ಗಳಲ್ಲಿ 81.37 ರೂ. ದರ ಇದೆ. ಡೀಸೆಲ್ ಬೆಲೆ ಅನುಕ್ರಮವಾಗಿ 73.30 ರೂ ಮತ್ತು 73.39 ರೂ.ಆಗಿದೆೆ. ನಾಲ್ಕು ಮಹಾನಗರಗಳಲ್ಲಿ ದಿಲ್ಲಿಯಲ್ಲಿ ಕಡಿಮೆ ತೆರಿಗೆಯ ಕಾರಣ ತೈಲ ಬೆಲೆ ಕಡಿಮೆಯಾಗಿದ್ದರೆ, ಮುಂಬೈಯಲ್ಲಿ ವ್ಯಾಟ್ ದರ ಅಧಿಕವಾಗಿರುವ ಕಾರಣ ತೈಲ ಬೆಲೆ ಹೆಚ್ಚಾಗಿರುತ್ತದೆ. ಆಗಸ್ಟ್ 15ರ ಬಳಿಕ ಪೆಟ್ರೋಲ್ ಬೆಲೆಯಲ್ಲಿ (ಲೀಟರ್‌ಗೆ) 4.20 ರೂ, ಡೀಸೆಲ್ ಬೆಲೆಯಲ್ಲಿ 4.53 ರೂ. ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News