ನಾರ್ತ್ ಕ್ಯಾರಲೈನ್ ತೀರಕ್ಕೆ ಅಪ್ಪಳಿಸಿದ ‘ಫ್ಲಾರೆನ್ಸ್’

Update: 2018-09-14 14:39 GMT

ವಿಲ್ಮಿಂಗ್ಟನ್ (ನಾರ್ತ್ ಕ್ಯಾರಲೈನ), ಸೆ. 14: ‘ಫ್ಲಾರೆನ್ಸ್’ ಚಂಡಮಾರುತ ಶುಕ್ರವಾರ ಮುಂಜಾನೆ ನಾರ್ತ್ ಕ್ಯಾರಲೈನದಲ್ಲಿ ತೀರಕ್ಕೆ ಅಪ್ಪಳಿಸಿದೆ. ಚಂಡಮಾರುತದ ಪರಿಣಾಮವಾಗಿ ಸಮುದ್ರದ ನೀರು ಕಿಲೋಮೀಟರ್‌ಗಟ್ಟಳೆ ಒಳ ಪ್ರದೇಶಗಳಿಗೆ ನುಗ್ಗಿದೆ.

ಬಿರುಗಾಳಿಗೆ ಸಿಲುಕಿ ಕುಸಿದ ಹೊಟೇಲೊಂದರಿಂದ 60ಕ್ಕೂ ಹೆಚ್ಚು ಮಂದಿಯನ್ನು ಹೊರಗೆ ತೆಗೆಯಲಾಗಿದೆ. ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿ ನೀಡಲಾಗಿದ್ದ ಆದೇಶವನ್ನು ಪಾಲಿಸದ ಹಲವರು ಅವರ ಕಟ್ಟಡಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ.

ಚಂಡಮಾರುತದ ಪ್ರಭಾವವು ಹಲವು ಗಂಟೆಗಳ ಕಾಲ ಮುಂದುವರಿಯಲಿದೆ ಎಂಬ ಎಚ್ಚರಿಕೆಯನ್ನು ಹವಾಮಾನ ಮುನ್ಸೂಚನೆ ಸಂಸ್ಥೆಗಳು ನೀಡಿವೆ. ಚಂಡಮಾರುತವು ಇನ್ನೂ ಪ್ರಬಲವಾಗಿಯೇ ಮುಂದುವರಿದಿದ್ದು, ಅದು ಸಾಗರದಿಂದ ಈಗಲೂ ಶಕ್ತಿಯನ್ನು ಪಡೆದುಕೊಳ್ಳುತ್ತಿದೆ.

‘ಫ್ಲಾರೆನ್ಸ್’ ‘ಕೆಟಗರಿ 1’ ಚಂಡಮಾರುತವಾಗಿ ವಿಲ್ಮಿಂಗ್ಟನ್‌ನ ಪೂರ್ವಕ್ಕೆ ಕೆಲವು ಮೈಲಿ ದೂರದಲ್ಲಿ ತೀರಕ್ಕೆ ಅಪ್ಪಳಿಸಿದೆ. ಚಂಡಮಾರುತದ ಕೇಂದ್ರಬಿಂದು ರೈಟ್ಸ್‌ವಿಲ್ ಬೀಚ್ ಸಮೀಪ ತೀರ ಸೇರಿದೆ ಎಂದು ರಾಷ್ಟ್ರೀಯ ಚಂಡಮಾರುತ ಕೇಂದ್ರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News