ಮೂಡುಬಿದಿರೆ: ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‍ಶಿಪ್‍; ರೆಡ್ ಕ್ಯಾಮಲ್ಸ್ ಸ್ಕೂಲ್ ಪ್ರಥಮ

Update: 2018-09-15 06:32 GMT

ಮೂಡುಬಿದಿರೆ, ಸೆ. 11: ಶೋರಿನ್ ರಿಯೂ ಕರಾಟೆ ಅಸೋಸಿಯೇಶನ್ ಮತ್ತು ಎಂ.ಕೆ. ಅನಂತರಾಜ್ ದೈಹಿಕ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಗಂಜೀಮಠ ವಂಡೇಲಾ ಹಾಲ್‍ನಲ್ಲಿ ನಡೆದ 16ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಮಂಗಳೂರಿನ ರೆಡ್ ಕ್ಯಾಮಲ್ಸ್ ಸ್ಕೂಲ್ 2018ರ ಚಾಂಪಿಯನ್‍ಶಿಪ್ ಪ್ರಶಸ್ತಿ ಪಡೆದಿದ್ದು, ದ್ವಿತೀಯ ಸ್ಥಾನವನ್ನು ಮೂಡುಬಿದಿರೆಯ ಅಲ್ ಫುರ್ಖಾನ್ ಇಸ್ಲಾಮಿಕ್ ಸ್ಕೂಲ್ ತನ್ನದಾಗಿಸಿಕೊಂಡಿತು.

ತೃತೀಯ ಪ್ರಶಸ್ತಿಯನ್ನು ಬರಕಾ ಇಂಟರ್ ನ್ಯಾಷನಲ್ ಸ್ಕೂಲ್ ಅಡ್ಯಾರ್ ಪಡೆಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಧನಂಜಯ ಶೆಟ್ಟಿ ವಹಿಸಿದ್ದರು. ಮಾಜಿ ಸಚಿವ ಅಭಯಚಂದ್ರ ಜೈನ್, ರೆಡ್ ಕ್ಯಾಮಲ್ ಶಾಲೆಯ ಪ್ರಾಚಾರ್ಯ ಆಶಾ ಲತಾ ಸೋನ್ಸ್, ಮುಹಮ್ಮದ್ ನವಾಝ್, ಶೀರಿನ್ ರಿಯೂ ಕರಾಟೆಯ ಮುಖ್ಯ ಶಿಕ್ಷಕ ಶಿಹಾನ್ ನದೀಮ್ ಹಾಗೂ ಸಂಘಟನೆ ಕಾರ್ಯದರ್ಶಿ ರಾಜೇಶ್ ಉಪಸ್ಥಿತರಿದ್ದರು.

ನಿತ್ಯಾನಂದ ಕೆಮ್ಮಣ್ಣು, ಸತೀಶ್ ಬೆಳ್ಮಣ್, ರೋಹಿತಾಕ್ಷ, ಸುಂದರಂ, ರಹ್ಮಾನ್, ಅಮೃತ್, ಪ್ರಶಾಂತ್ ಶೆಟ್ಟಿ ಮುಖ್ಯ ತೀರ್ಪುಗಾರರಾಗಿದ್ದರು. ಈ ಪಂದ್ಯಾಟದಲ್ಲಿ 68 ಶಾಲೆಯ ಸುಮಾರು 700 ವಿದ್ಯಾರ್ಥಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News