ಪುತ್ತೂರು : ಬೈಕ್ ಪಲ್ಟಿ; ಸವಾರ ಮೃತ್ಯು

Update: 2018-09-15 06:55 GMT

ಪುತ್ತೂರು, ಸೆ. 15: ಬೈಕ್ ಪಲ್ಟಿಯಾಗಿ ಗಂಭೀರ ಗಾಯಗೊಂಡ ಸವಾರ ಮೃತಪಟ್ಟ ಘಟನೆ ಪುತ್ತೂರು ದರ್ಬೆ ಪ್ರವಾಸಿ ಮಂದಿರದ ಬಳಿ ಶುಕ್ರವಾರ ರಾತ್ರಿ ನಡೆದಿದೆ.

ಮೃತರನ್ನು ಪುತ್ತೂರು ನರಿಮೊಗರು ನಿವಾಸಿ ನಟೇಶ್ (35) ಎಂದು ಗುರುತಿಸಲಾಗಿದೆ. 

ಪುತ್ತೂರು ದರ್ಬೆ ಪ್ರವಾಸಿ ಮಂದಿರದ ಬಳಿ ಅಪಘಾತ ಸಂಭವಿಸಿದ್ದು, ಗಾಯಳುವನ್ನು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ದಾರಿ ಮದ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.

ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News