ಸೆ. 21ರಿಂದ ಸಂತ ಅಲೋಶಿಯಷ್ ಕಾಲೇಜಿನಲ್ಲಿ ಚಲನಚಿತ್ರೋತ್ಸವ

Update: 2018-09-15 07:01 GMT

ಬೆಂಗಳೂರು, ಸೆ.15: ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಸೆ. 21, 22 ಹಾಗೂ 23 ರಂದು ಮಂಗಳೂರಿನ ಸಂತ ಅಲೋಶಿಯಷ್ ಕಾಲೇಜಿನಲ್ಲಿ ಪ್ರಾದೇಶಿಕ ಭಾಷಾ ಚಲನಚಿತ್ರೋತ್ಸವವನ್ನು ಆಯೋಜಿಸಲಾಗಿದೆ ಎಂದು ಅಕಾಡಮಿಯ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ಶನಿವಾರ ವಾರ್ತಾ ಇಲಾಖೆಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕ‌ನ್ನಡ ಸಿನೆಮಾವು ಒಳಗೊಂಡಂತೆ ತುಳು, ಕೊಂಕಣಿ, ಕೊಡವ, ಬ್ಯಾರಿ ಹಾಗೂ  ಬಂಜಾರ ಭಾಷೆಗಳ ಒಟ್ಟು 9 ಸಿನೆಮಾಗಳನ್ನು ಪ್ರದರ್ಶಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News