ವಿಚಾರಗೋಷ್ಠಿ ಸ್ಪರ್ಧೆ: ಪುತ್ತೂರು ವಿವೇಕಾನಂದ ಕಾಲೇಜು ಚಾಂಪಿಯನ್

Update: 2018-09-15 12:46 GMT

ಉಡುಪಿ, ಸೆ.15: ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ವಿಜ್ಞಾನ ಸಂಘದ ವತಿಯಿಂದ ದಿ. ವಂ.ಜಿ.ಎಲ್.ಡಿಕ್ರುಜ್ ಸ್ಮರಣಾರ್ಥ ಇತ್ತೀಚೆಗೆ ಕಾಲೇಜಿನಲ್ಲಿ ಏರ್ಪಡಿಸಲಾದ ಅಂತರ್ ಕಾಲೇಜು ವಿಚಾರಗೋಷ್ಠಿ ಸ್ಪರ್ಧೆಯಲ್ಲಿ ಪುತ್ತೂರು ವಿವೇಕಾನಂದ ಕಾಲೇಜು ಚಾಂಪಿಯನ್ ಹಾಗೂ ಉಡುಪಿ ಎಂಜಿಎಂ ಕಾಲೇಜು ದ್ವಿತೀಯ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತ ಉಪಪ್ರಾಂಶುಪಾಲ ಹಾಗೂ ಗಣಿತ ವಿಭಾಗದ ಮುಖ್ಯಸ್ಥ ಡಾ.ಜೊನ್ ಷೆರಾ ಮಾತನಾಡಿದರು. ವಿಜ್ಞಾನ ಹಾಗೂ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಸುಬ್ರಹ್ಮಣ್ಯ ಜೋಷಿ ಅಧ್ಯಕ್ಷತೆ ವಹಿಸಿದ್ದರು.

ವಿಜ್ಞಾನ ಸಂಘದ ಅಧ್ಯಕ್ಷೆ ಆರಝೂ ಸ್ವಾಗತಿಸಿದರು. ಸಂಘದ ಸಂಯೋಜಕ ಅರೆಂರಝಾ ಕ್ಯಾರನ್ ಸಿಕ್ವೇರಾ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯ ದರ್ಶಿ ಸೋಫಿಯಾ ಡಿಸೋಜ ವಂದಿಸಿದರು.

ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಪ್ರೊ.ಜೋಸೆಪ್ ಪೀಟರ್ ಫೆರ್ನಾಂಡಿಸ್ ಭಾಗ ವಹಿಸಿದ್ದರು. ವಿಜೇತರಿಗೆ ಮಂಗಳೂರು ವಿವಿ ಭೌತಶಾಸ್ತ್ರ ಹಾಗೂ ರಸಾಯನ ಶಾಸ್ತ್ರ ಉಪನ್ಯಾಸಕರ ಸಂಘದ ವತಿಯಿಂದ ಬಹುಮಾನವನ್ನು ಪ್ರಾಯೋಜಿಸ ಲಾಯಿತು. ವಿಜ್ಞಾನ ಸಂಘದ ಖಜಾಂಚಿ ರಮ್ಯಾ ವಂದಿಸಿದರು. ಕಾವ್ಯಾ ಪೈ, ಸ್ಮಿತಾ ಪಿಂಟೊ, ಕೀರ್ತಿ ಶೆಟ್ಟಿ ಹಾಗೂ ಕಾವ್ಯಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News