ರವೀಂದ್ರ ಮಲ್ಯರಿಗೆ ಡಾಕ್ಟರೇಟ್ ಪದವಿ

Update: 2018-09-16 05:49 GMT

ಮಂಗಳೂರು, ಸೆ.16: ಕೆನರಾ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಸಹ ಪ್ರಾಧ್ಯಾಪಕ ರವೀಂದ್ರ ಮಲ್ಯ ಅವರು ಮಾಹೆಯ ಡಾ.ರಘುವೀರ ಪೈ ಮತ್ತು ಡಾ.ಸತೀಶ್ ಶೆಣೈ ಮಾರ್ಗದರ್ಶನದಲ್ಲಿ ‘ಸ್ಟೆಬಿಲಿಟಿ ಆಫ್ ಮಲ್ಟಿಪಲ್ ಆಕ್ಸಿಲ್ ಗ್ರೂವ್ ವಾಟರ್ ಲೂಬ್ರಿಕೇಟೆಡ್ ಬೇರಿಂಗ್ ಇನ್‌ದ ಟರ್ಬುಲೆಂಟ್ ರೆಜಿಮ್’ ವಿಷಯದೊಂದಿಗೆ ಮಂಡಿಸಿದ ಮಂಡಿಸಿದ ಮಹಾಪ್ರಬಂಧಕ್ಕೆ ಮಾಹೆ ವಿವಿಯು ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.

ರವೀಂದ್ರ ಮಲ್ಯ ಅವರು ಮಂಗಳೂರಿನ ಸಾವಯವ ಕೃಷಿ, ಜಲ ಮರುಪೂರಣ ತಜ್ಞ ಎಸ್. ಗಣೇಶ್ ಮಲ್ಯ ಹಾಗೂ ವಿನಯ ಮಲ್ಯ ದಂಪತಿಯ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News