ಕೋಲ್ಕತಾ:ಮಾರುಕಟ್ಟೆಯಲ್ಲಿ ಭಾರೀ ಬೆಂಕಿ ಅನಾಹುತ: ಅಪಾರ ನಷ್ಟ

Update: 2018-09-16 08:00 GMT

ಕೋಲ್ಕತಾ, ಸೆ.16: ಕೋಲ್ಕತಾದ ಬಾಗ್ರಿ ಮಾರುಕಟ್ಟೆಯಲ್ಲಿ ಕಳೆದ ತಡರಾತ್ರಿ ಭಾರೀ ಬೆಂಕಿ ಅನಾಹುತ ಸಂಭವಿಸಿದ್ದು, ಅಪಾರ ನಷ್ಟ ಉಂಟಾಗಿದೆ.

ನಿನ್ನೆ ರಾತ್ರಿ 2:45ರ ಸುಮಾರಿಗೆ ಈ ಘಟನೆ ನಡೆದ ಕಾರಣ ಮಾರುಕಟ್ಟೆಯಲ್ಲಿ ಯಾರೂ ಇರಲಿಲ್ಲ. ಮಾರುಕಟ್ಟೆ ಸುತ್ತ ಸಾಕಷ್ಟು ಕಟ್ಟಡಗಳಿದ್ದ ಕಾರಣ ಬೆಂಕಿ ವ್ಯಾಪಿಸದಂತೆ ತಡೆಯುವುದೇ ದೊಡ್ಡ ಸವಾಲಾಗಿತ್ತು. ಸುಮಾರು 30 ಅಗ್ನಿ ಶಾಮಕ ದಳದ ವಾಹನಗಳು ಬೆಂಕಿ ನಂದಿಸಲು ಶತ ಪ್ರಯತ್ನ ನಡೆಸುತ್ತಿವೆ. ಈತನಕ ಯಾವುದೇ ಜೀವಹಾನಿಯಾದ ಬಗ್ಗೆ ವರದಿಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News