ಗೋವು ಧಾರ್ಮಿಕ ಪ್ರಾಣಿಯೆಂದು ಹೇಳುವುದು ತಪ್ಪು: ಬಾಬಾ ರಾಮ್ ದೇವ್

Update: 2018-09-16 09:49 GMT

ಹೊಸದಿಲ್ಲಿ, ಸೆ.16: ಗೋವಿಗೆ ಯಾವುದೇ ಧರ್ಮವಿಲ್ಲ. ಗೋವನ್ನು ಧಾರ್ಮಿಕ ಪ್ರಾಣಿಯೆಂದು ಬಿಂಬಿಸುವುದು ತಪ್ಪು ಎಂದು ಯೋಗಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.

ಎನ್ ಡಿಟಿವಿ ಕಾಂಕ್ಲೇವ್ ನಲ್ಲಿ ಮಾತನಾಡಿದ ಅವರು, ನಾನು ರಾಜಕೀಯದಿಂದ ಹೊರಗುಳಿದಿದ್ದೇನೆ. ನಾನು ಎಲ್ಲಾ ಪಕ್ಷಗಳೊಂದಿಗೂ ಇದ್ದೇನೆ ಮತ್ತು ಯಾವುದೇ ಪಕ್ಷದೊಂದಿಗೆ ಇಲ್ಲ ಎಂದರು.

ಸೆಕ್ಷನ್ 377 ಬಗ್ಗೆ ಪ್ರತಿಕ್ರಿಯಿಸಿದ ರಾಮ್ ದೇವ್, ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಮಾತನಾಡುವುದು ದೇಶದ ಮೌಲ್ಯಗಳಿಗೆ ವಿರುದ್ಧವಾಗಿದೆ. ನಾನದನ್ನು ಮಾಡುವುದಿಲ್ಲ. ಆದರೆ ಇಲ್ಲಿ ಕುಳಿತಿರುವ ಎಲ್ಲರೂ ತಮ್ಮ ಮಕ್ಕಳನ್ನು ಅದೇ ರೀತಿ ಮದುವೆ ಮಾಡಿಸುತ್ತಾರೆಯೇ ಎಂದು ಪ್ರಶ್ನಿಸಿದರು.

“ಪೆಟ್ರೋಲ್, ಡೀಸೆಲ್ ಗಳನ್ನು ಜಿಎಸ್ ಟಿ ವ್ಯಾಪ್ತಿಯಡಿ ತರಬೇಕು. ತೆರಿಗೆ ನಷ್ಟವು ದೇಶವನ್ನು ತಡೆಯುವುದಿಲ್ಲ. ನಾವು ಶ್ರೀಮಂತರ ಮೇಲೆ ತೆರಿಗೆ ಹೇರಬಹುದು. ಪೆಟ್ರೋಲ್ ಪಂಪ್ ಗಳನ್ನು ಸ್ಥಾಪಿಸಲು ನನಗೆ ಸರಕಾರ ಅನುಮತಿ ನೀಡಲಿ. ನಾವು ಪೆಟ್ರೋಲ್, ಡೀಸೆಲನ್ನು 35ರಿಂದ 40 ರೂ.ಗೆ ಮಾರುತ್ತೇವೆ ಎಂದವರು ಇದೇ ಸಂದರ್ಭ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News