ಭಾರತೀಯ ಪತಿ ತಮಿಳುನಾಡಿನಲ್ಲಿ ನನ್ನನ್ನು ತೊರೆದಿದ್ದಾರೆ: ಅಮೆರಿಕನ್ ಪತ್ನಿಯ ಆರೋಪ

Update: 2018-09-16 13:45 GMT

ಕಾಂಚೀಪುರಂ, ಸೆ.16: ನನ್ನ ಭಾರತೀಯ ಮೂಲದ ಪತಿ ನನ್ನನ್ನು ತಮಿಳುನಾಡಿನ ಅಪರಿಚಿತ ಊರಿನಲ್ಲಿ ಬಿಟ್ಟು ತೆರಳಿರುವುದಾಗಿ ಅಮೆರಿಕನ್ ಮಹಿಳೆಯೊಬ್ಬರು ಆರೋಪಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಕಾಂಚೀಪುರಂನ ವೆಲ್ಲಗೇಟ್ ಸಮೀಪ ಹರಿದ ಬಟ್ಟೆಯನ್ನು ಧರಿಸಿ ಅತ್ತಿಂದಿತ್ತ ತಿರುಗಾಡುತ್ತಿದ್ದ ಮಹಿಳೆಯನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. “ನಾನು ಮತ್ತು ನನ್ನ ಪತಿ ಚೆನ್ನೈಯ ವೆಲಚೆರಿಯಲ್ಲಿ ನೆಲೆಸಿದ್ದೇವೆ. ನಮ್ಮ ಮಧ್ಯೆ ಪದೇಪದೇ ಜಗಳಗಳು ನಡೆಯುತ್ತಿದ್ದವು. ಹಾಗಾಗಿ ನನ್ನ ಪತಿ ನನ್ನನ್ನು ಇಲ್ಲಿಗೆ ಕರೆತಂದು ನನ್ನೊಬ್ಬಳನ್ನೇ ಬಿಟ್ಟು ಕಾರಿನಲ್ಲಿ ಪರಾರಿಯಾಗಿದ್ದಾರೆ” ಎಂದು ಮಹಿಳೆ ಆರೋಪಿಸಿದ್ದಾರೆ. ಮಹಿಳೆಯನ್ನು ಈಸ್ಟ್ ಕೋಸ್ಟ್ ರಸ್ತೆಯಲ್ಲಿರುವ ಸರಕಾರಿ ಮಹಿಳೆಯರ ಆಶ್ರಮಕ್ಕೆ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಮಹಿಳೆಯ ಪತಿಯನ್ನು ಮಾಧ್ಯಮಗಳು ಸಂಪರ್ಕಿಸಿದಾಗ ಏನನ್ನೂ ಹೇಳಲು ನಿರಾಕರಿಸಿರುವ ಆತ, ನನ್ನ ವಕೀಲರೇ ಎಲ್ಲದಕ್ಕೂ ಉತ್ತರಿಸುತ್ತಾರೆ ಎಂದು ಹೇಳಿರುವುದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News