ಕೋಡಿ: ಬ್ಯಾರೀಸ್ ಕಾಲೇಜಿನಲ್ಲಿ ಮಾದಕ ದ್ರವ್ಯ ವ್ಯಸನದ ಬಗ್ಗೆ ಮಾಹಿತಿ ಕಾರ್ಯಕ್ರಮ

Update: 2018-09-17 11:48 GMT

ಕುಂದಾಪುರ, ಸೆ.17: ಇಲ್ಲಿನ ಕೋಡಿಯ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ಘಟಕದ ವತಿಯಿಂದ ಮಾದಕ ದ್ರವ್ಯ ವ್ಯಸನದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕುಂದಾಪುರ ಪೊಲೀಸ್ ಠಾಣಾಧಿಕಾರಿ ಹರೀಶ್ ಆರ್. ನಾಯಕ್, ಡ್ರಗ್ಸ್ ಕಣ್ಣಿಗೆ ಕಾಣದಂತೆ ದಾಳಿ ಮಾಡುವ ವಸ್ತು. ಈ ಬಗ್ಗೆ ಎಚ್ಚರ ತಪ್ಪಿದರೆ ಪ್ರಾಣ ಹಾನಿ ಸಂಭವಿಸಬಹುದು ಎಂದು ಎಚ್ಚರಿಕೆ ನೀಡಿದರು.

 ಕಾರ್ಯಕ್ರಮದಲ್ಲಿ ರವಿ ಜಿ.ಎಸ್., ಮಂಜುನಾಥ್‌ಮೊದಲಾದವರು ಉಪಸ್ಥಿತರಿದ್ದರು.

ಕಾಲೇಜಿನ ಎನ್ನೆಸ್ಸೆಸ್ ಯೋಜನಾಧಿಕಾರಿ ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕಿ ವಿನಯ ಕಾಮತ್ ಸ್ವಾಗತಿಸಿದರು. ಮಧುಶ್ರೀ ವಂದಿಸಿದರು. ಗಣಕ ವಿಭಾಗದ ಉಪನ್ಯಾಸಕ ಖಲೀಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News