ಬ್ರಹ್ಮಾವರ: 33 ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ

Update: 2018-09-17 12:51 GMT

ಬ್ರಹ್ಮಾವರ, ಸೆ.17: ಜಮೀಯ್ಯತುಲ್ ಫಲಾಹ್ ಬ್ರಹ್ಮಾವರ ತಾಲೂಕು ಘಟಕದ ವತಿಯಿಂದ 33 ಮಂದಿ ಅರ್ಹ ವಿದ್ಯಾರ್ಥಿಗಳಿಗೆ 1.06 ಲಕ್ಷ ರೂ. ಸಹಾಯಧನವನ್ನು  ಬ್ರಹ್ಮಾವರ ಬಾರ್ನೆಸ್ ಪ್ಲಾಝಾದಲ್ಲಿ ವಿತರಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಸ್ಥಳೀಯ ಮುಖಂಡ ನಿತ್ಯಾನಂದ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತು ಉನ್ನತ ಅವಕಾಶಗಳನ್ನು ಪಡೆದು ಬದುಕಿನಲ್ಲಿ ಯಶಸ್ಸು ಸಾಧಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಕೋಟ ಇಬ್ರಾಹಿಂ ಸಾಹೇಬ್ ವಹಿಸಿದ್ದರು. ಉಡುಪಿ ಜಿಲ್ಲಾ ಅಪರ ಸರಕಾರಿ ವಕೀಲ ಮುಹಮ್ಮದ್ ಸುಹಾನ್ ವಿಶೇಷ ಉಪನ್ಯಾಸ ನೀಡಿದರು.

ಜಮೀಯ್ಯತುಲ್ ಫಲಾಹ್ ಕೇಂದ್ರ ಸಮಿತಿಯ ಉಪಾಧ್ಯಕ್ಷ ಹಾಗೂ ಕುಂದಾಪುರ ತಾಲೂಕು ಅಧ್ಯಕ್ಷ ಶೇಖ್ ಅಬೂ ಮುಹಮ್ಮದ್, ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಅಧ್ಯಕ್ಷ ಇಬ್ರಾಹಿಂ ಕೆ.ಪಿ., ಘಟಕದ ಕಾರ್ಯದರ್ಶಿ ಶೇಖಂ ಮುಹಮ್ಮದ್ ಶೇರಾಝ್, ಉಡುಪಿ ತಾಲೂಕು ಅಧ್ಯಕ್ಷ ಖತೀಬ್ ಅಬ್ದುಲ್ ರಶೀದ್, ಕಾರ್ಯದರ್ಶಿ ಕಾಸಿಂ ಬಾರಕೂರು, ಕಾಪು ಘಟಕದ ಅಧ್ಯಕ್ಷ ಶಭೀ ಅಹ್ಮದ್ ಕಾಝಿ ಉಪಸ್ಥಿತರಿದ್ದರು. ತಾಜುದ್ದೀನ್ ಇಬ್ರಾಹಿಂ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News