ರಾಜಲಕ್ಷ್ಮೀ ಎಂ.ಜಿ.ಗೆ ಡಾಕ್ಟರೇಟ್ ಪದವಿ

Update: 2018-09-17 12:52 GMT

ಉಡುಪಿ, ಸೆ.17: ಕುತ್ಪಾಡಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಮಹಾವಿದ್ಯಾಲಯದ ಪಂಚಕರ್ಮ ಸ್ನಾತಕೋತ್ತರ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ರಾಜಲಕ್ಷ್ಮೀ ಎಂ.ಜಿ. ಮಂಡಿಸಿದ ರೋಲ್ ಆಫ್ ಶಿಲಾಜತು ಲೋಹ ರಸಾಯನ ಇನ್ ದ ಮ್ಯಾನೇಜ್‌ಮೆಂಟ್ ಆಫ್ ಪಕ್ಷಾಘಾತ ಡ್ಯು ಟು ಮಾರ್ಗಾವರಣ ಎಂಬ ಮಹಾಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕ ಡಾಕ್ಟರೇಟ್ ನೀಡಿ ಗೌರವಿಸಿದೆ.

ಡಾ.ಜಿ.ಶ್ರೀನಿವಾಸ ಆಚಾರ್ಯ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂಧ ಮಂಡಿಸಲಾಗಿದೆ. ಉಡುಪಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾ ವಿದ್ಯಾಲಯದಲ್ಲಿ ಆಯುರ್ವೇದ ಪದವಿ ಹಾಗೂ ಅಹಮದಾಬಾದ್ (ಜಿಎಯು)ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು, ದಿ.ಎಂ.ವಿ. ಗೋಪಾಲಕೃಷ್ಣ ಮತ್ತು ಆರ್.ಗೌರಮ್ಮ ದಂಪತಿ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News