ವಿಶ್ವೇಶ್ವರಯ್ಯರ ಯೋಜನೆಗಳು ಅಧ್ಯಯನಕ್ಕೆ ಯೋಗ್ಯ: ಪ್ರೊ.ಹೊಳ್ಳ

Update: 2018-09-17 12:54 GMT

ಉಡುಪಿ, ಸೆ.17: ಭಾರತದ ತಾಂತ್ರಿಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಗಳನ್ನು ತಂದ ವಿಶ್ವೇಶ್ವರಯ್ಯ ಓರ್ವ ಅಪರೂಪದ ದಾರ್ಶನಿಕ. ಅವರ ಎಲ್ಲ ಯೋಜನೆಗಳು ಇಂದು ಇತಿಹಾಸವನ್ನು ಸೃಷ್ಟಿಸಿದ್ದು, ವರ್ತಮಾನ ಕಾಲದ ತಂತ್ರಜ್ಞರಿಗೆ ಅಧ್ಯಯನ ಯೋಗ್ಯವಾಗಿದೆ ಎಂದು ಮಣಿಪಾಲ ಎಂಐಟಿಯ ಸಹಾಯಕ ನಿರ್ದೇಶಕ ಪ್ರೊ.ರಾಘವೇಂದ್ರ ಹೊಳ್ಳ ಹೇಳಿದ್ದಾರೆ.

ಮಣಿಪಾಲ ಡಾ.ಟಿ.ಎಂ.ಎ. ಪೈ ಪಾಲಿಟೆಕ್ನಿಕ್‌ನಲ್ಲಿ ಶನಿವಾರ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನದ ಅಂಗವಾಗಿ ಆಯೋಜಿಸಲಾದ ಇಂಜಿನಿಯರ್ಸ್‌ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕಾಲೇಜಿನ ಶೈಕ್ಷಣಿಕ ಸಂಯೋಜಕ ಟಿ.ರಂಗ ಪೈ ಮಾತನಾಡಿದರು. ಪ್ರಾಂಶು ಪಾಲ ನರೇಂದ್ರ ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ಪ್ರಾಂಶುಪಾಲ ಪ್ರಶಾಂತ್ ಶೆಟ್ಟಿ, ಸಿವಿಲ್ ವಿಭಾಗದ ಮುಖ್ಯಸ್ಥ ದೊರೆಸ್ವಾಮಿ ಉಪಸ್ಥಿತರಿದ್ದರು. ಅರೆನ್ ಡಿಸೋಜ ಸ್ವಾಗತಿಸಿದರು. ಉಪನ್ಯಾಸಕಿ ಲಾವಣ್ಯ ಕುಮಾರಿ ವಂದಿಸಿ ದರು. ಅನುಷಾ ರಾವ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News