ಭಾರತವು ಲೈಂಗಿಕ ಮನೋಭಾವವನ್ನು ಆಧರಿಸಿ ಪ್ರವಾಸಿಗಳ ವಿರುದ್ಧ ತಾರತಮ್ಯ ಮಾಡುವುದಿಲ್ಲ

Update: 2018-09-17 13:29 GMT

ಹೊಸದಿಲ್ಲಿ, ಸೆ.17: ಭಾರತವು ಪ್ರವಾಸಿಗಳ ಲೈಂಗಿಕ ಮನೋಭಾವವನ್ನು ಆಧರಿಸಿ ಅವರ ವಿರುದ್ಧ ತಾರತಮ್ಯವನ್ನು ತೋರಿಸುವುದಿಲ್ಲ ಮತ್ತು ಪ್ರತಿಯೊಬ್ಬರಿಗೂ ಈ ದೇಶಕ್ಕೆ ಸ್ವಾಗತವಿದೆ ಎಂದು ಪ್ರವಾಸೋದ್ಯಮ ಸಚಿವ ಕೆ.ಜೆ.ಆಲ್ಫಾನ್ಸೋ ಅವರು ಸೋಮವಾರ ಇಲ್ಲಿ ತಿಳಿಸಿದರು.

 ಸಲಿಂಗ ಕಾಮವು ಅಪರಾಧವಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಎತ್ತಿ ಹಿಡಿದಿರುವ ಮತ್ತು ಥೈಲಂಡ್ ಎಲ್‌ಜಿಬಿಟಿ ಸಮುದಾಯಕ್ಕೆ ಸುರಕ್ಷಿತ ತಾಣ ಎಂದು ಬಿಂಬಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಎಲ್‌ಜಿಬಿಟಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಬಗ್ಗೆ ಸರಕಾರದ ಅಭಿಪ್ರಾಯದ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಚಿವರು,ನಮ್ಮ ಪ್ರವಾಸೋದ್ಯಮವು ಎಲ್ಲರಿಗಾಗಿ ಇದೆ. ವ್ಯಕ್ತಿಯ ಲೈಂಗಿಕ ಆದ್ಯತೆಗಳ ವಿರುದ್ಧ ನಾವು ತಾರತಮ್ಯವನ್ನು ಮಾಡುವುದಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News