ಉತ್ತರಪ್ರದೇಶದ ವಜ್ರ ಮುಷ್ಟಿ ಮತ್ತೊಮ್ಮೆ ದಲಿತರ ಮೇಲೆ ಎರಗಿದೆ

Update: 2018-09-17 18:17 GMT

ಭಾಗ - 2

ಅಂದು ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಸಾಕಷ್ಟು ದೌರ್ಜನ್ಯ ನಡೆಸಿದ್ದರು. ಆರು ಮಂದಿ ದಲಿತರನ್ನು ಹಲವು ದಿನಗಳ ಕಾಲ ಬೆನ್ನಟ್ಟಿದ್ದರು. ಅವರ ಮನೆಗಳ ಮೇಲೆ, ಅವರು ಮನೆಯಲ್ಲಿಲ್ಲದಾಗ ದಾಳಿ ನಡೆಸಲಾಯಿತು. ಇದೆಲ್ಲ ಪ್ರತಿಭಟನೆ ನಡೆಯುವ ಮೊದಲೇ ಪೊಲೀಸರು ಮಾಡಿದ ಕೆಲಸ. ಪ್ರತಿಭಟನಾ ದಿನದಂದು ಬೆಳಗ್ಗೆ ಪೊಲೀಸರು ಮತ್ತೊಮ್ಮೆ ದಲಿತ ಕಾರ್ಯಕರ್ತರನ್ನು ಬಂಧಿಸಲು ಪ್ರಯತ್ನಿಸಿದರೂ ಅವರು ಪುನಃ ತಮ್ಮ ಪ್ರಯತ್ನದಲ್ಲಿ ವಿಫಲರಾದರು. ಅಂತಿಮವಾಗಿ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಪೊಲೀಸರು ಅವರನ್ನು ತಡೆದರು.

‘ದಿ ವೈರ್’ನ ಪ್ರಶಾಂತ್ ಕನೋಜಿಯಾ ಜೂನ್‌ನಲ್ಲಿ ವರದಿಮಾಡಿರುವಂತೆ, ಬಂಧಿತರಾಗಿದ್ದವರಲ್ಲಿ 12 ಮಂದಿ ಅಪ್ತಾಪ್ತವಯಸ್ಕರು (ಮೈನರ್ಸ್‌). ಇವರ ವಿರುದ್ಧ ಪೊಲೀಸರು ಹೂಡಿರುವ ಮೊಕದ್ದಮೆಗಳಲ್ಲಿ ಇವರ ಮೇಲೆ ಕ್ರಿಮಿನಲ್ ಒಳಸಂಚು ಮತ್ತು ಕೊಲೆಯತ್ನದ ಆರೋಪಗಳನ್ನು ಹೊರಿಸಲಾಗಿದೆ.

‘‘ಇಂತಹ ಎಳೆಯ ಹುಡುಗರು ಕ್ರಿಮಿನಲ್ ಒಳಸಂಚು, ಡಕಾಯಿತಿ ಮತ್ತು ಕೊಲೆಯತ್ನದಲ್ಲಿ ಒಳಗೊಳ್ಳಲು ಸಾಧ್ಯವೇ? ಪೊಲೀಸರು ಅವರೆಲ್ಲರ ಮೇಲೆ ಮೊಕದ್ದಮೆ ಹೂಡಿರುವ ರೀತಿಯನ್ನು ಗಮನಿಸಿದರೆ, ಪೊಲೀಸರು ಸುಮ್ಮನೆ, ಸಾರಾಸಗಟಾಗಿ ದಲಿತ ಸಮುದಾಯದ ಸದಸ್ಯರನ್ನು ತಮಗೆ ಬೇಕಾದ ಹಾಗೆ ಆಯ್ದುಕೊಂಡು, ಸತ್ಯ ಸಂಗತಿಗಳನ್ನು ಪರಿಶೀಲಿಸದೆ ಅಥವಾ ಸರಿಯಾದ ವಿಚಾರಣೆ ನಡೆಸದೆ ಮೊಕದ್ದಮೆ ಹೂಡಿದ್ದಾರೆ ಅನ್ನಿಸುತ್ತದೆ. ಅವರು ಕೈಗೆ ಸಿಕ್ಕಿದ ದಲಿತರನ್ನು ಬಂಧಿಸಿದ್ದಾರೆ’’. ಎಂದಿದ್ದಾರೆ ಮೈನರ್‌ಗಳ ಪರವಾಗಿ ವಕಾಲತ್ತು ನಡೆಸುತ್ತಿರುವ ನ್ಯಾಯವಾದಿ ಸತೀಶ್ ಕುಮಾರ್.

ಬಂಧಿಸಲ್ಪಟ್ಟ ಬಾಲಕರ ಪೋಷಕರು ಹೇಳುವಂತೆ, ಆ ಹುಡುಗರು ಹಿಂಸೆಯಲ್ಲಿ ಭಾಗಿಯಾಗಿರಲಿಲ್ಲ; ಅವರು ದಲಿತ ಸಮುದಾಯದ ಒಂದು ಉಪಜಾತಿಯಾದ ಜಾಟವ್ ಜಾತಿಗೆ ಸೇರಿರುವ ಕಾರಣಕ್ಕಾಗಿಯೇ ಅವರನ್ನು ಗುರಿಯಾಗಿರಿಸಿ ಬಂಧಿಸಲಾಗಿದೆ. ಹಿಂಸೆ ಮುಗಿದ ಬಳಿಕ ಸಂಜೆ ನನ್ನ ಮಗ ಔಷಧಿ ತರಲು ಹೋಗಿದ್ದ, ಅವನಿಗೆ ಹನ್ನೊಂದು ವರ್ಷ ಅವನ ಎತ್ತರ ನಾಲ್ಕು ಅಡಿ. ಇಷ್ಟು ಚಿಕ್ಕ ಹುಡುಗ ಹಿಂಸೆಯಲ್ಲಿ ಹೇಗೆ ಭಾಗಿಯಾಗಲು ಸಾಧ್ಯ? ಅವರು ನಮ್ಮನ್ನು ಹೆದರಿಸಲು ಜಾಟವ್ ಸಮುದಾಯದ ಹುಡುಗರನ್ನು ಮಾತ್ರ ಬಂಧಿಸಿದ್ದಾರೆ ಎಂದು ಅಪ್ರಾಪ್ತ ವಯಸ್ಕ ಹುಡುಗರಲ್ಲೊಬ್ಬನ ತಾಯಿ ಹೇಳಿದ್ದಾಳೆ.

ಈಗ ಒಬ್ಬನನ್ನು ಹೊರತು ಪಡಿಸಿ ಉಳಿದ ಎಲ್ಲ ಹುಡುಗರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಆದರೆ ಅವರ ಮೇಲೆ ಹೊರಿಸಲಾಗಿರುವ ಗಂಭೀರ ಕ್ರಿಮಿನಲ್ ಆಪಾದನೆಗಳನ್ನು ಅವರು ಇನ್ನೂ ಎದುರಿಸಬೇಕಾಗಿದೆ.

ಪ್ರತಿಭಟನೆಗೆ ಅವಕಾಶವಿಲ್ಲ

ಆಗಸ್ಟ್ 30ರಂದು ಸುಮಾರು 500 ಮಂದಿ ದಲಿತರು ಒಂದು ಪುಟ್ಟ ಹಳ್ಳಿ ಉಲ್ದೇಪುರ್‌ನಿಂದ ಮೀರತ್ ನಗರದ ಚೌಧರಿ ಚರಣ್ ಸಿಂಗ್ ಪಾರ್ಕ್ ತಲುಪಿದರು. ಅಲ್ಲಿ ಒಂದು ‘ದಲಿತ್ ಮಹಾ ಪಂಚಾಯತ್’ ನಡೆಸುವುದು ಅವರ ಉದ್ದೇಶವಾಗಿತ್ತು. ಆಗಸ್ಟ್ 9ರಂದು ಉಲ್ದೇಪುರದಲ್ಲಿ ನಡೆದ 17ರ ಹರೆಯದ ರೋಹಿತ್ ಜಾಟವ್‌ನ ಕೊಲೆಗೆ ಆಪಾದಿತರೆನ್ನಲಾದ ರಜಪೂತ ಸಮುದಾಯದ ಸದಸ್ಯರನ್ನು ಬಂಧಿಸುವಲ್ಲಿ ಪೊಲೀಸರ ವೈಫಲ್ಯ, ರೋಹಿತನ ಕುಟುಂಬದ ಸದಸ್ಯರು ಮತ್ತು ಇತರ ದಲಿತರ ವಿರುದ್ಧ ಹೊರಿಸಲಾದ ಪ್ರತಿ- ಆಪಾದನೆಗಳು ಅವರ ಅಹವಾಲುಗಳಾಗಿದ್ದವು.

ಅಂದು ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಸಾಕಷ್ಟು ದೌರ್ಜನ್ಯ ನಡೆಸಿದ್ದರು. ಆರು ಮಂದಿ ದಲಿತರನ್ನು ಹಲವು ದಿನಗಳ ಕಾಲ ಬೆನ್ನಟ್ಟಿದ್ದರು. ಅವರ ಮನೆಗಳ ಮೇಲೆ, ಅವರು ಮನೆಯಲ್ಲಿಲ್ಲದಾಗ ದಾಳಿ ನಡೆಸಲಾಯಿತು. ಇದೆಲ್ಲ ಪ್ರತಿಭಟನೆ ನಡೆಯುವ ಮೊದಲೇ ಪೊಲೀಸರು ಮಾಡಿದ ಕೆಲಸ. ಪ್ರತಿಭಟನಾ ದಿನದಂದು ಬೆಳಗ್ಗೆ ಪೊಲೀಸರು ಮತ್ತೊಮ್ಮೆ ದಲಿತ ಕಾರ್ಯಕರ್ತರನ್ನು ಬಂಧಿಸಲು ಪ್ರಯತ್ನಿಸಿದರೂ ಅವರು ಪುನಃ ತಮ್ಮ ಪ್ರಯತ್ನದಲ್ಲಿ ವಿಫಲರಾದರು. ಅಂತಿಮವಾಗಿ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಪೊಲೀಸರು ಅವರನ್ನು ತಡೆದರು. ಸೆಕ್ಷನ್ 144 ಜಾರಿ ಗೊಂಡಿರುವುದರಿಂದ ಅವರು ಪ್ರತಿಭಟಿಸುವಂತಿಲ್ಲ ಎಂದು ಅಲ್ಲಿದ್ದ ಪೊಲೀಸರು ಹೇಳಿದರು.

ಆದರೆ, ಅದೇ ಪ್ರತಿಭಟನಾ ಸ್ಥಳದಲ್ಲಿ ಇನ್ನೆರಡು ಪ್ರತಿಭಟನೆಗಳಿಗೆ ಪೊಲೀಸರು ಅನುಮತಿ ನೀಡಿದರು. ತಾವು ಬೆಳೆದ ಕಬ್ಬಿಗೆ ಕೊಡಬೇಕಾದ ಬಾಕಿ ಮೊತ್ತವನ್ನು ಕೊಡುವಂತೆ ಹಕ್ಕೊತ್ತಾಯ ಸಲ್ಲಿಸಿ ಸುಮಾರು ಐವತ್ತು ಮಂದಿ ರೈತರು ಪ್ರತಿಭಟನೆ ನಡೆಸಿದರು ಮತ್ತು ವೇತನ ಹೆಚ್ಚಳವಾಗಬೇಕೆೆಂಬ ಬೇಡಿಕೆ ಮುಂದಿಟ್ಟು ಸುಮಾರು ಇನ್ನೂರು ಮಂದಿ ಕಾರ್ಮಿಕರು ಅಲ್ಲಿ ಪ್ರತಿಭಟನೆ ನಡೆಸಿದರು. ಹೀಗೆ ಆ ಎರಡು ಪ್ರತಿಭಟನಾಕಾರ ಗುಂಪುಗಳಿಗೆ ಅವಕಾಶ ನೀಡಿರುವಾಗ ತಮಗ್ಯಾಕೆ ನೀಡಿಲ್ಲ ಎಂದು ದಲಿತರು ಪ್ರಶ್ನಿಸಿದಾಗ ಆ ವಿಷಯಕ್ಕೆ (ದಲಿತರು ಎತ್ತಿರುವ ವಿಷಯಕ್ಕೆ) ಪ್ರತಿಭಟನೆಗಳಿಗೆ ಅವಕಾಶವಿಲ್ಲವೆಂದು ಪೊಲೀಸರು ಹೇಳಿದರು.

ಎರಡು ವಾರಗಳ ಮೊದಲು ಆಗಸ್ಟ್ 14ರಂದು ರೋಹಿತ್‌ನ ಕೊಲೆಯಲ್ಲಿ ಆಪಾದಿತರು ಎನ್ನಲಾದವರೂ ಸೇರಿ, ರಜಪೂತ ಸಮುದಾಯದ ಸದಸ್ಯರು ಒಂದು ಮಹಾ ಪಂಚಾಯತ್ ನಡೆಸಿದರು. ಅವರು ತಮ್ಮ ಪ್ರತಿಭಟನೆಗೆ ಆಯ್ಕೆ ಮಾಡಿದ ಜಾಗ ಕೂಡ ಅದೇ ಚೌಧರಿ ಚರಣ್ ಸಿಂಗ್ ಪಾರ್ಕ್. ‘ಟೈಮ್ಸ್ ಆಫ್ ಇಂಡಿಯಾ’ದಲ್ಲಿನ ವರದಿಯೊಂದರ ಪ್ರಕಾರ ರೋಹಿತ್‌ನ ಕೊಲೆ ಪ್ರಕರಣದಲ್ಲಿ ರಜಪೂತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಪೊಲೀಸ್ ವಿಚಾರಣೆಯ ವಿರುದ್ಧ ನಡೆಯುತ್ತಿರುವ ಪೂರ್ವಾಗ್ರಹ ಪೀಡಿತ ವಿಚಾರಣೆಯ ವಿರುದ್ಧ ಪ್ರತಿಭಟಿಸಲು ಸಾವಿರಾರು ರಜಪೂತರು ಅಂದು ಅಲ್ಲಿ ನೆರೆದಿದ್ದರು. ಅವರ ಪ್ರತಿಭಟನೆಗೆ ಅವಕಾಶ ನೀಡಲಾಯಿತು ಮತ್ತು ಪೊಲೀಸರು ದಂಡ ಸಂಹಿತೆಯ 144ನೇ ಸೆಕ್ಷನ್‌ನ್ನು ಬಳಸಲಿಲ್ಲ.

ಇದಕ್ಕೆ ವ್ಯತಿರಿಕ್ತವಾಗಿ ಆಗಸ್ಟ್ 30ರಂದು ದಲಿತ ಪ್ರತಿಭಟನಾಗಾರರನ್ನು ಅವರು ಬಂದಿದ್ದ ಟ್ರ್ಯಾಕ್ಟರ್ ಮತ್ತು ಟೆಂಪೋಗಳಿಗೆ ತುಂಬಿಸಿ ಅವರವರ ಹಳ್ಳಿಗಳಿಗೆ ಹಿಂದೆ ಕಳುಹಿಸಲಾಯಿತು. ಅಲ್ಲಿದ್ದ ಇನ್ನೂರಕ್ಕೂ ಹೆಚ್ಚು ಮಂದಿ ಪೊಲೀಸರು ಪ್ರತಿಭಟನಾ ಸ್ಥಳವನ್ನು ಸುತ್ತುವರಿದು ದಲಿತ ಪ್ರತಿಭಟನಾಕಾರರಿಗೆ ಅದು ದೊರಕದಂತೆ ನೋಡಿಕೊಂಡರು. ಆಗ ಪ್ರತಿಭಟನಾನಿರತ ರೈತರು ಮತ್ತು ಕಾರ್ಮಿಕರು ಉತ್ತರ ಪ್ರದೇಶ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಉದ್ಯಾನದ ಸುತ್ತ ಸಾಗಿದರು ಸೆಕ್ಷನ್ 144ರಿಂದ ಅವರ ಪ್ರತಿಭಟನೆಗೆ ಯಾವ ತೊಂದರೆಯೂ ಆಗಲಿಲ್ಲ.

ಕೃಪೆ : ದಿ ವೈರ್.ಇನ್

Writer - ಕಬೀರ್ ಅಗರ್‌ವಾಲ್

contributor

Editor - ಕಬೀರ್ ಅಗರ್‌ವಾಲ್

contributor

Similar News