ಏಶ್ಯಕಪ್: ಅಫ್ಘಾನ್ ವಿರುದ್ಧ ಶ್ರೀಲಂಕಾ 134/5

Update: 2018-09-17 18:18 GMT

 ಅಬುಧಾಬಿ, ಸೆ.17: ಅಫ್ಘಾನಿಸ್ತಾನ ವಿರುದ್ದ ಏಶ್ಯಕಪ್‌ನ ಎ ಗುಂಪಿನ ಪಂದ್ಯದ ಗೆಲುವಿಗೆ 250 ರನ್ ಗುರಿ ಪಡೆದಿರುವ ಶ್ರೀಲಂಕಾ ತಂಡ 33 ಓವರ್‌ಗಳ ಅಂತ್ಯಕ್ಕೆ 134 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದೆ.

ನಾಯಕ ಆ್ಯಂಜೆಲೊ ಮ್ಯಾಥ್ಯೂಸ್(21)ಹಾಗೂ ತಿಸಾರ ಪೆರೇರ(13) ಕ್ರೀಸ್ ಕಾಯ್ದುಕೊಂಡಿದ್ದಾರೆ. ಆರಂಭಿಕ ಆಟಗಾರ ಉಪುಲ್ ತರಂಗ 36 ರನ್ ಗಳಿಸಿ ಔಟಾದರು. ಇನ್ನೋರ್ವ ಆರಂಭಿಕ ದಾಂಡಿಗ ಕುಶಾಲ್ ಮೆಂಡಿಸ್ ಇನಿಂಗ್ಸ್‌ನ ಮೊದಲ ಓವರ್‌ನ 2ನೇ ಎಸೆತದಲ್ಲಿ ಶೂನ್ಯಕ್ಕೆ ಔಟಾದರು.

2ನೇ ವಿಕೆಟ್‌ಗೆ 54 ರನ್ ಜೊತೆಯಾಟ ನಡೆಸಿದ ತರಂಗ ಹಾಗೂ ಧನಂಜಯ ಡಿಸಿಲ್ವಾ ತಂಡಕ್ಕೆ ಆಸರೆಯಾದರು. ಆದರೆ, ಡಿಸಿಲ್ವಾ 23 ರನ್‌ಗೆ ರನೌಟಾದರು. ಡಿಸಿಲ್ವಾ ಔಟಾದ ಬಳಿಕ ಬಂದ ಕುಶಾಲ್ ಪೆರೇರ 17 ರನ್ ಗಳಿಸಲಷ್ಟೇ ಶಕ್ತರಾದರು. ಸ್ಪಿನ್ನರ್ ರಶೀದ್ ಖಾನ್(1-17), ರಹ್ಮಾನ್(1-27) ಹಾಗೂ ನೈಬ್(1-28)ತಲಾ ಒಂದು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News