ಏಶ್ಯಕಪ್:ಹಾಂಕಾಂಗ್ ವಿರುದ್ಧ ಧವನ್ ಶತಕ

Update: 2018-09-18 14:39 GMT

 ದುಬೈ, ಸೆ.18: ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಹಾಂಕಾಂಗ್ ವಿರುದ್ಧ ಮಂಗಳವಾರ ಇಲ್ಲಿ ನಡೆದ ಏಶ್ಯಕಪ್ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ.

36ನೇ ಓವರ್‌ನಲ್ಲಿ ಎಹ್ಸಾನ್ ಖಾನ್ ಎಸೆತದಲ್ಲಿ ಒಂದು ರನ್ ಗಳಿಸಿದ ಧವನ್ 14ನೇ ಶತಕ ಪೂರೈಸಿದರು. ಧವನ್ 105 ಎಸೆತಗಳಲ್ಲಿ 13 ಬೌಂಡರಿಗಳ ನೆರವಿನಿಂದ ಶತಕ ಪೂರ್ಣಗೊಳಿಸಿದರು.

 ಧವನ್ ಶತಕ ಪೂರೈಸಿದಾಗ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಭಾರತದ ಕ್ರಿಕೆಟ್ ಆಟಗಾರರು ಎದ್ದುನಿಂತು ಗೌರವ ಸಲ್ಲಿಸಿದರು. ರೋಹಿತ್ ಶರ್ಮಾರೊಂದಿಗೆ ಇನಿಂಗ್ಸ್ ಆರಂಭಿಸಿದ ಧವನ್ ಮೊದಲ ವಿಕೆಟ್‌ಗೆ 45 ರನ್ ಜೊತೆಯಾಟ ನಡೆಸಿದರು. ಶರ್ಮಾ 23 ರನ್‌ಗೆ ಔಟಾದ ಬಳಿಕ ಅಂಬಟಿ ರಾಯುಡು(60 ರನ್) ಅವರೊಂದಿಗೆ 2ನೇ ವಿಕೆಟ್‌ಗೆ 116 ರನ್ ಜೊತೆಯಾಟ ನಡೆಸಿದ ಧವನ್ ತಂಡವನ್ನು ಆಧರಿಸಿದರು. ಭಾರತ 40 ಓವರ್ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 238 ರನ್ ಗಳಿಸಿದೆ. ಧವನ್ ಹಾಗೂ ದಿನೇಶ್ ಕಾರ್ತಿಕ್ 3ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 68 ರನ್ ಸೇರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News